Connect with us

FILM

ಪೋಟೋಗ್ರಾಫರ್ ಕೈಚಳಕಕ್ಕೆ ಮಾಡೆಲ್ ಆದ ಬಲೂನ್ ಮಾರುವ ಹುಡುಗಿ

ಕೇರಳ: ಹಬ್ಬಗಳಲ್ಲಿ ಬಲೂನ್ ಮಾರುವ ಹುಡುಗಿಯೊಬ್ಬಳು ಪೋಟೋಗ್ರಾಫರ್ ಕಣ್ಣಿಗೆ ಬಿದ್ದು, ಇದೀಗ ಇಂಟರ್ ನೆಟ್ ಸೆನ್ಸೆಷನ್ ಆಗಿ ಬದಲಾಗಿದ್ದಾಳೆ.


ಇತ್ತೀಚೆಗೆ ಕೇರಳದ ಕೂಲಿ ಕಾರ್ಮಿಕನ ಪೋಟೋ ಆತನನ್ನು ಮಾಡೆಲ್ ಆಗಿ ಮಾಡಿದ್ದು, ಅದೇ ರೀತಿ ದೇವಸ್ಥಾನದ ಜಾತ್ರೆಯೊಂದರ ವೇಳೆ ಬಲೂನುಗಳನ್ನು ಮಾರಾಟ ಮಾಡುತ್ತಿದ್ದ ಬಾಲೆಯೊಬ್ಬಳು ರಾತ್ರಿ ಬೆಳಗಾಗುವುದರಲ್ಲಿ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾಳೆ.


ಕೇರಳದ ಅಂದಲೂರ್ ಕಾವು ಜಾತ್ರೆ ವೇಳೆ ಬಲೂನು ಮಾರಾಟ ಮಾಡುತ್ತಿದ್ದ ಬಾಲಕಿ ಕಿಸ್ಬೂ, ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಅವರ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾಳೆ. ಆಕೆಯ ಪೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಇದು ವೈರಲ್ ಆಗುತ್ತಿದ್ದಂತೆಯೇ ಆಕೆಗೆ ಫೋಟೋಶೂಟ್ ಒಂದರಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಈ ಫೋಟೋಶೂಟ್ ಚಿತ್ರಗಳಲ್ಲಿ ಆಕೆಯ ಅಂದ ಹಾಗೂ ಸೊಬಗು ನೆಟ್ಟಿಗರ ಮನಸೂರೆಗೊಂಡಿದೆ.


ಕಿಸ್ಬೂ ಅವರನ್ನು ಮೇಕಪ್ ಕಲಾವಿದೆ ರೆಮ್ಯಾ ಪ್ರಾಜುಲ್ ಸಂಪೂರ್ಣವಾಗಿ ಮಾಡೆಲ್ ಆಗಿ ಬದಲಾಯಿಸಿದ್ದಾರೆ. ಇದೀಗ ಕಿಸ್ಬೂ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದು, ಸಾಂಪ್ರದಾಯಿಕ ಕಸವು ಸೀರೆ ಹಾಗೂ ಆಭರಣಗಳಲ್ಲಿ ತೆಗೆದ ಪೋಟೋಗಳು ವೈರಲ್ ಆಗಿವೆ.

Advertisement
Click to comment

You must be logged in to post a comment Login

Leave a Reply