LATEST NEWS
ದಕ್ಷಿಣಕನ್ನಡದಲ್ಲಿ ಕೊರೊನಾಕ್ಕೆ 29ನೇ ಬಲಿ

ಮಂಗಳೂರು ಜುಲೈ 09 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ 29ನೇ ಬಲಿ ಪಡೆದಿದೆ. ಇಂದು ಮಂಗಳೂರು ಕೊವಿಡ್ ವೆನ್ಲಾಕ್ ಆಸ್ಪತ್ರೆಯಲ್ಲಿ ಬೊಳೂರು ನಿವಾಸಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಇಂದು ಮೃತಪಟ್ಟ ವ್ಯಕ್ತಿ 48 ವರ್ಷದ ಬೋಳೂರು ನಿವಾಸಿ ಕೊರೊನಾ ದೃಢಪಟ್ಟ ಹಿನ್ನಲೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಈಗಾಗಲೇ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಸಾವನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅಲ್ಲದೆ ಒಂದು ಕಡೆ ದಿನ ಕೊರೊನಾ ಸೊಂಕಿತರ ಸಂಖ್ಯೆ 100ಕ್ಕಿಂತ ಅಧಿಕ ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ರಾಜ್ಯದಲ್ಲಿ ಸೊಂಕಿತರ ಸಂಖ್ಯೆಯಲ್ಲಿ ದಕ್ಷಿಣಕನ್ನಡ 3ನೇ ಸ್ಥಾನಕ್ಕೆ ಏರಿಕೆಯಾಗಿದೆ.
