Connect with us

    LATEST NEWS

    ಮೆಟ್ರೋ ಸ್ಟೇಷನ್ ನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ರಕ್ಷಣೆ…!!

    ನವದೆಹಲಿ ಎಪ್ರಿಲ್ 14: ಅಕ್ಷರಧಾಮ ಮೆಟ್ರೋ ನಿಲ್ದಾಣದ ಕಟ್ಟಡದಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ಸಿಐಎಸ್‍ಎಫ್ ಯೋಧರು ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.


    25 ವರ್ಷದ ಯುವತಿಯೊಬ್ಬಳು ಅಕ್ಷರಧಾಮ ಮೆಟ್ರೋ ನಿಲ್ದಾಣದ ಕಟ್ಟದ ಮೇಲೆ ನಿಂತು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಸಂದರ್ಭ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‍ಎಫ್) ಸಿಬ್ಬಂದಿ ಯುವತಿಯನ್ನು ಗಮನಿಸಿದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮೆಟ್ರೋ ನಿಲ್ದಾಣದ ಮುಖ್ಯಸ್ಥರು ಯುವತಿಯನ್ನು ಕೆಳಗೆ ಬರುವಂತೆ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಯುವತಿ ತಾನು ಅಂಚಿನ ಮೇಲಿನಿಂದ ಇಳಿಯುವುದಿಲ್ಲ ಎಂದು ಜಗಳವಾಡಿದ್ದಾಳೆ.


    ಕೊನೆಗೆ ಸಮೀಪದಲ್ಲಿದ್ದ ಮಾಲ್‍ವೊಂದರ ನಾಲ್ವರು ಸಿಬ್ಬಂದಿಯೊಂದಿಗೆ ಶಿಫ್ಟ್ ಇನ್ ಚಾರ್ಜ್ ಕೆಳಗೆ ಹೋಗಿ ದಪ್ಪವಾದ ಕಂಬಳಿ ವ್ಯವಸ್ಥೆಗೊಳಿಸಿ ಯುವತಿಯನ್ನು ರಕ್ಷಿಸಲು ಮುಂದಾದರು. ಆದರೂ ಯುವತಿ ಆತ್ಮಹತ್ಯೆಗೆ ಕಟ್ಟಡದಿಂದ ಜಿಗಿದಿದ್ದಾಳೆ. ಕೂಡಲೇ ಕಂಬಳಿಯಿಂದ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply