Connect with us

    LATEST NEWS

    ತಾನೇ ತಯಾರಿಸಿದ್ದ ಹೆಲಿಕಾಪ್ಟರ್ ಬ್ಲೇಡ್ ನಿಂದ ಕತ್ತು ಸೀಳಿ ಯುವಕ ಸಾವು

    ಮುಂಬೈ : ಹಿಂದಿ ಸಿನೆಮಾ ತ್ರೀ ಇಡಿಯಟ್ಸ್ ನ ಪ್ರೇರಣೆಯಿಂದ ಹೆಲಿಕಾಪ್ಟರ್ ತಯಾರಿಸಿ ಅದರ ಪರೀಕ್ಷಾರ್ಥ ಹಾರಾಟಕ್ಕೆ ಪರೀಕ್ಷೆ ನಡೆಸುತ್ತಿರುವ ನಡೆದ ಅವಘಡಕ್ಕೆ ಹೆಲಿಕಾಪ್ಟರ್ ಮಾದರಿ ಮಾಡಿ ಅದಕ್ಕೆ ಅಳವಡಿಸಿದ್ದ ಬ್ಲೇಡ್ ಒಂದು ಸಂಶೋಧಕನ ಕುತ್ತಿಗೆಯನ್ನೇ ಕತ್ತರಿಸಿದೆ. ಮಹಾಗಾಂವ್ ತಹಸಿಲ್‌ನ ಫುಲ್ಸವಾಂಗಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ.


    ಮೃತನನ್ನು 24 ವರ್ಷದ ಶೇಖ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಎಂಟನೇ ತರಗತಿಗೆ ಶಾಲೆ ಬಿಟ್ಟ ಶೇಖ್ ತನ್ನ ಅಣ್ಣನ ಗ್ಯಾಸ್ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕಬ್ಬಿಣದ ಉಪಕರಣ ತಯಾರಿಕೆಯಲ್ಲಿ ಪಾರಮ್ಯ ಸಾಧಿಸಿಕೊಂಡಿದ್ದ ಶೇಖ್ ಸ್ಟೀಲ್ ಮತ್ತು ಆಲ್ಯೂಮಿನಿಯಂ ಶೀಟ್ ಗಳನ್ನು ಬಳಸಿಕೊಂಡು ಮಿನಿ ಹೆಲಿಕಾಪ್ಟರ್ ಮಾದರಿ ತಯಾರಿಸಿದ್ದ. ಅದರಂತೆ ಹೆಲಿಕಾಪ್ಟರ್ ನಿರ್ಮಿಸಿ ಅದರ ಟ್ರಯಲ್ ವೇಳೆ ಹೆಲಿಕಾಪ್ಟರ್ ನ ಬ್ಲೇಡ್ ಕತ್ತು ಸೀಳಿಸಿದೆ.


    ಈ ಬಾರಿಯ ಸ್ವಾತಂತ್ರ್ಯ ದಿನದಂದು ತನ್ನ ಹೆಲಿಕಾಪ್ಟರ್ ಪರಿಚಯಿಸಬೇಕು ಎಂಬ ಆಸೆ ಶೇಖ್ ದಾಗಿತ್ತು. ಮಂಗಳವಾರ ರಾತ್ರಿ ಟೆಸ್ಟ್ ಮಾಡಲು ಮುಂದಾಗಿ ಫೈಲಟ್ ಸೀಟ್ ನಲ್ಲಿ ಕುಳಿತುಕೊಂಡು ಎಂಜಿನ್ ಸ್ಟಾರ್ಟ್ ಮಾಡಿದಾಗ ಅಳವಡಿಕೆ ಮಾಡಿದ್ದ ರೆಕ್ಕೆ ಕತ್ತರಿಸಿದೆ. ಕುತ್ತಿಗೆಯನ್ನು ಸೀಳಿದೆ. ಲೋಕಲ್ ರಾಂಚೋ ಎಂದೇ ಹೆಸರು ಮಾಡಿದ್ದ ಹುಡುಗ ದುರ್ಮರಣಕ್ಕೆ ಗುರಿಯಾಗಿದ್ದಾನೆ.

    ವಿಡಿಯೋಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ 

    ತಾನೇ ತಯಾರಿಸಿದ್ದ ಹೆಲಿಕಾಪ್ಟರ್ ಬ್ಲೇಡ್ ನಿಂದ ಕತ್ತು ಸೀಳಿ ಯುವಕ ಸಾವು ವಿಡಿಯೋ

    Share Information
    Advertisement
    Click to comment

    Leave a Reply

    Your email address will not be published. Required fields are marked *