Connect with us

    LATEST NEWS

    ರಾಂಗ್ ಸೈಡ್ ನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದ ಬೈಕ್ – ಸವಾರ ಬಲಿ – ಅಪಘಾತದ ವಿಡಿಯೋ ವೈರಲ್

    ಹೊಸದಿಲ್ಲಿ ಸೆಪ್ಟೆಂಬರ್ 20: ರಾಂಗ್ ಸೈಡ್‌ನಿಂದ ಬಂದ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನಪ್ಪಿದ ಘಟನೆ ಗುರುಗ್ರಾಮದ ರಸ್ತೆಯಲ್ಲಿ ನಡೆದಿದೆ. ಸದ್ಯಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೃತ ದುರ್ದೈವಿಯನ್ನು 23 ವರ್ಷದ ಅಕ್ಷತ್ ಗರ್ಗ್ ಎಂದು ಗುರುತಿಸಲಾಗಿದೆ. ಭಾನುವಾರ ಡಿಎಲ್‌ಎಫ್ 2ನೇ ಹಂತದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಸ್ನೇಹಿತರ ಜತೆ ತೆರಳುವಾಗ ಆತನ ಬೈಕ್ ಕಾರಿಗೆ ಜೋರಾಗಿ ಅಪ್ಪಳಿಸಿತ್ತು. ರಾಂಗ್ ಸೈಡ್‌ನಿಂದ ಬಂದು ಕಾನೂನು ಉಲ್ಲಂಘಿಸಿದ್ದಲ್ಲದೆ, ವ್ಯಕ್ತಿಯ ಸಾವಿಗೆ ಕಾರಣನಾದ ಕಾರು ಚಾಲಕನನ್ನು ಬಂಧಿಸಿದ್ದರೂ, ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

     

    ಅಕ್ಷತ್ ಗರ್ಗ್‌ನ ಹಿಂದೆ ಬರುತ್ತಿದ್ದ ಸ್ನೇಹಿತನ ಬೈಕ್‌ನಲ್ಲಿನ ಗೋ ಪ್ರೋ ಆಕ್ಷನ್ ಕ್ಯಾಮೆರಾದಲ್ಲಿ ಈ ಅಪಘಾತದ ಎದೆನಡುಗಿಸುವ ದೃಶ್ಯ ಸೆರೆಯಾಗಿದೆ. ಅಪಘಾತದಲ್ಲಿ ಮೃತಪಟ್ಟ ಯುವಕನ ತಾಯಿ, ಆರೋಪಿಗೆ ತಕ್ಷಣವೇ ಜಾಮೀನು ಮಂಜೂರು ಮಾಡಿದ ಕ್ರಮವನ್ನು ಪ್ರಶ್ನಿಸಿದ್ದಾರೆ. ಇದು ಕಾನೂನಿನ ವೈಫಲ್ಯ ಎಂದು ಅವರು ಕಿಡಿಕಾರಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply