Connect with us

    LATEST NEWS

    ಮುಗಿದ 2 ಸಾವಿರ ರೂಪಾಯಿ ನೋಟ್ ಆಯುಷ್ಯ….ವಿನಿಮಯಕ್ಕೆ ಇಂದು ಕೊನೆ ದಿನ…!!

    ನವದೆಹಲಿ ಸೆಪ್ಟೆಂಬರ್ 30: ಕಳೆದ ಮೇ ನಲ್ಲಿ 2,000ರು.ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದ್ದ ಆರ್‌ಬಿಐ, ಬಳಿಕ ಅವುಗಳನ್ನು ಬ್ಯಾಂಕ್‌ಗೆ ಹಿಂದಿರುಗಿಸಲು ನೀಡಿದ್ದ 3 ತಿಂಗಳ ಗಡುವಿಗೆ ಶನಿವಾರ ಸೆಪ್ಟೆಂಬರ್ 30 ದಿನವಾಗಿದೆ.


    ಹೀಗಾಗಿ ಕೊನೆಯ ದಿನ ಸಾರ್ವಜನಿಕರು ತಮ್ಮ ಹತ್ತಿರದ ಯಾವುದೇ ಬ್ಯಾಂಕ್‌ಗೆ ತೆರಳಿ ತಮ್ಮಲ್ಲಿರುವ 2,000 ರು. ಮುಖ ಬೆಲೆಯ ನೋಟು ನೀಡಿ ಇತರ ನೋಟುಗಳಿಂದ ಬದಲಿಸಿಕೊಳ್ಳಬಹುದು ಅಥವಾ ತಮ್ಮ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಬಹುದಾಗಿದೆ. ಈ ನಡುವೆ ಗಡುವು ಮುಗಿದ ಬಳಿಕವೂ ನೋಟುಗಳನ್ನು ಹಿಂದಿರುಗಿಸಲು ಸಾಧ್ಯವಾಗದಿದ್ದರೆ ಏನು ಮಾಡಬೇಕೆಂಬ ಪ್ರಶ್ನೆ ಎದ್ದಿದೆ. ಆದರೆ ಈ ಬಗ್ಗೆ ಅಕ್ಟೋಬರ್ 1 ರಂದು ಆರ್‌ಬಿಐ ತನ್ನ ಯಾವುದೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಗಡುವು ವಿಸ್ತರಿಸದೆ ನೋಟು ಅಮಾನ್ಯ ಮಾಡಬಹುದು ಎನ್ನಲಾಗುತ್ತಿದೆ.

    ಈಗಾಗಲೇ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರು. ಮೌಲ್ಯದ ನೋಟುಗಳ ಪೈಕಿ ಆ.31ರ ವೇಳೆಗೆ ಶೇ.93ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿದ್ದವು.

    Share Information
    Advertisement
    Click to comment

    You must be logged in to post a comment Login

    Leave a Reply