LATEST NEWS
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಕೊರೊನಾ ಪಾಸಿಟಿವ್ ಪ್ರಕರಣ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಕೊರೊನಾ ಪಾಸಿಟಿವ್ ಪ್ರಕರಣ
ಮಂಗಳೂರು ಮೇ.17: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಎರಡು ಕೊರೊನಾ ಪ್ರಕರಣ ದೃಢಪಟ್ಟಿದೆ. ಮಂಗಳೂರಿನ ಜಪ್ಪಿನಮೊಗರು ನಿವಾಸಿ 31 ವರ್ಷದ ಯುವಕನಿಗೆ ಸೊಂಕು ತಗುಲಿದ್ದು, ಮತ್ತೊಂದು ಪ್ರಕರದಲ್ಲಿ ಮಂಗಳೂರಿನ ಯಯ್ಯಾಡಿ ನಿವಾಸಿ 35 ವರ್ಷದ ಮಹಿಳೆಗೆ ಸೊಂಕು ತಗುಲಿದೆ. ಇದರೊಂದಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.
ಇಂದು ಜಿಲ್ಲೆಯಲ್ಲಿ ಪತ್ತೆಯಾದ ಒಂದು ಪ್ರಕರಣ ಈಗ ಬಾರಿ ಕುತೂಹಲ ಮೂಡಿಸಿದೆ. 31 ವರ್ಷದ ಯುವಕ ಕೊರೊನಾ ಲಕ್ಷಣದ ಅನುಮಾನ ಬಂದ ಹಿನ್ನಲೆ ಕೋವಿಡ್ ಆಸ್ಪತ್ರೆಗೆ ಬಂದು ಸ್ವಯಂ ಪರೀಕ್ಷೆಗೆ ಒಳಗಾಗಿದ್ದ. ಈಗ ಆತನಿಗೆ ಬಂದ ಸೊಂಕಿನ ಮೂಲ ಯಾವುದು ಎನ್ನುವುದು ಇನ್ನು ಪತ್ತೆಯಾಗಬೇಕಿದೆ.
ಮತ್ತೊಂದು ಪ್ರಕರಣ ಯೆಯ್ಯಾಡಿ ಮೂಲದ 35 ವರ್ಷದ ಮಹಿಳೆ ಮೇ 14 ರಂದು ಮುಂಬೈನಿಂದ ಮಂಗಳೂರಿಗೆ ಆಗಮಿಸಿದ್ದರು ಈ ಹಿನ್ನಲೆ ಆಕೆಯ ಪತಿ ಮತ್ತು ಮಗುವನ್ನು ಕ್ವಾರಂಟೈನ್ ನಲ್ಲಿದ್ದರು.
You must be logged in to post a comment Login