Connect with us

  FILM

  ತಾಯಿ ಮಾಡಿದ ಅವಮಾನಕ್ಕೆ ಮಗಳನ್ನು ಡ್ರಗ್ಸ್ ಪ್ರಕರಣದಲ್ಲಿ ಜೈಲಿಗೆ ಹಾಕಿದ..!!

  ಮುಂಬೈ ಎಪ್ರಿಲ್ 26: ಕಚ್ಚಲು ಬಂದ ನಾಯಿಗೆ ಹೊಡೆಯಲು ಮುಂದಾದ ವ್ಯಕ್ತಿಗೆ ನಾಯಿ ಮಾಲಕಿ ಅವಮಾನ ಮಾಡಿದ್ದಕ್ಕೆ ಮುಂಬೈನ ವ್ಯಕ್ತಿಯೊಬ್ಬ ಆಕೆಯ ಮಗಳನ್ನೇ ಡ್ರಗ್ಸ್ ಪ್ರಕರಣದಲ್ಲಿ ಶಾರ್ಜಾದಲ್ಲಿ ಅರೆಸ್ಟ್ ಮಾಡಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಬಂಧಿತ ಯುವತಿ ನಟಿಯಾಗಿದ್ದು ಬೊರಿವಲಿ ಮೂಲದ ನಟಿ ಕ್ರಿಸೈನ್ ಪಿರೇರಾ (27) ಡ್ರಗ್ಸ್ ಪ್ರಕರಣದಲ್ಲಿ ಶಾರ್ಜಾ ಜೈಲಿನಲ್ಲಿದ್ದಾರೆ. ಈ ಘಟನೆಯ ಪ್ರಮುಖ ಆರೋಪಿ ಆಂಥೋನಿ ಪಾಲ್ ಎಂದು ಗುರುತಿಸಲಾಗಿದ್ದು, ಈತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.


  ಆರೋಪಿ ಅಂಥೋನಿ ಪಾಲ್ ಮತ್ತು ಪ್ರಮೀಳಾ ಪಿರೇರಾ ಮುಂಬೈನಲ್ಲಿ ಒಂದೇ ಕಟ್ಟದಲ್ಲಿ ವಾಸಿಸುತ್ತಿದ್ದರು. ಪಾಲ್ ಪ್ರಮೀಳಾ ಪಿರೇರಾ ನಡುವೆ ಅನೇಕ ಬಾರಿ ಜಗಳ ನಡೆದಿದೆ ಎಂದು ಹೇಳಲಾಗಿದೆ. ಬಂಧಿತ ನಟಿ ಕ್ರಿಸೈನಾ ಪಿರೇರಾ ಅವರ ತಾಯಿ ಪ್ರಮೀಳಾ ಪಿರೇರಾ ಅವರ ಶ್ವಾನ, ಆ್ಯಂಥೋನಿ ಪೌಲ್‌ ಎಂಬವರನ್ನು ಬೊಗಳಿ, ಕಚ್ಚಲು ಹೋಗಿದೆ. ಅದರಿಂದ ತಪ್ಪಿಸಿಕೊಳ್ಳಲು ಆ್ಯಂಥೋನಿ ನಾಯಿಗೆ ಹೊಡೆಯಲು ಮುಂದಾದಾಗ, ಪ್ರಮೀಳಾ ಆತನನ್ನು ನಿಂದಿಸಿ, ಹಲವರ ಮುಂದೆ ಅವಮಾನಿಸಿದ್ದಾರೆ.


  ಅವಮಾನಿತನಾದ ಆ್ಯಂಥೋನಿ ಪ್ರತೀಕಾರ ತೀರಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾನೆ. ಆ್ಯಂಥೋನಿ ರವಿ ಎಂಬವನ ಸಹಾಯ ಪಡೆದು ನಟಿ ಕ್ರಿಸಾನ್ ಪಿರೇರಾ ಅವರ ತಾಯಿ ಪ್ರೇಮಿಳಾ ಅವರನ್ನು ಸಂಪರ್ಕಿಸಿ ತನ್ನನ್ನು ಟ್ಯಾಲೆಂಟ್ ಕನ್ಸಲ್ಟೆಂಟ್ ಎಂದು ಹೇಳಿಕೊಂಡಿದ್ದ. ವೆಬ್ ಸೀರೀಸ್‌ಗಾಗಿ ಶಾರ್ಜಾದಲ್ಲಿ ಆಡಿಷನ್‌ಗೆ ಹಾಜರಾಗುವಂತೆ ಪಿರೇರಾ ಗೆ ಹೇಳಿದ್ದಾನೆ. ಏಪ್ರಿಲ್ 1 ರಂದು ಅವಳು ಹೊರಡುವ ಒಂದು ದಿನ ಮೊದಲು, ರವಿಯು ಪಿರೇರಾ ಅವರನ್ನು ಹೋಟೆಲ್‌ನಲ್ಲಿ ಭೇಟಿಯಾಗಿ ಶಾರ್ಜಾದಲ್ಲಿರುವ ಒಬ್ಬರಿಗೆ ನೀಡಲು ಸ್ಮರಣಿಕೆಯನ್ನು ಕೊಟ್ಟಿದ್ದು. ಶಾರ್ಜಾ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಅವಳನ್ನು ಬರಮಾಡಿಕೊಳ್ಳುತ್ತಾರೆ ಮತ್ತು ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಅವರು ಹೇಳಿದರು.


  ಏಪ್ರಿಲ್ 1 ರಂದು, ಪಿರೇರಾ ಶಾರ್ಜಾ ವಿಮಾನ ನಿಲ್ದಾಣವನ್ನು ತಲುಪಿದಾಗ, ಅವರನ್ನು ಸ್ವೀಕರಿಸಲು ಯಾರೂ ಇರಲಿಲ್ಲ ಮತ್ತು ಯಾವುದೇ ಹೋಟೆಲ್ ಬುಕಿಂಗ್ ಮಾಡಲಾಗಿಲ್ಲ. ಆಕೆ ತನ್ನ ತಂದೆಗೆ ಕರೆ ಮಾಡಿದಾಗ ತಾನು ಮೋಸ ಹೋಗಿರುವುದು ಅರಿವಾಯಿತು. ರವಿ ನೀಡಿದ ಸ್ಮರಣಿಕೆ ಬಗ್ಗೆ ಆಕೆ ಹೇಳಿದಾಗ ಅನುಮಾನಗೊಂಡು ಪೊಲೀಸರನ್ನು ಸಂಪರ್ಕಿಸುವಂತೆ ಹೇಳಿದ್ದಾನೆ. ಅವಳು ಶಾರ್ಜಾ ಪೊಲೀಸರಿಗೆ ಹೋದಾಗ, ಅವರು ಸ್ಮರಣಿಕೆಯನ್ನು ಪರಿಶೀಲಿಸಿದರು ಮತ್ತು ಅದರೊಳಗೆ ಗಾಂಜಾ ಮತ್ತು ಅಫೀಮು ಅಡಗಿಸಿಟ್ಟಿದ್ದು, ನಂತರ ಅವರು ಪಿರೇರಾನನ್ನು ಬಂಧಿಸಿದರು.


  ನಂತರ ನಟಿ ಕ್ರಿಸಾನ್ ಪಿರೇರಾ ಅವರ ಕುಟುಂಬ ಮುಂಬೈ ಕ್ರೈಂ ಬ್ರ್ಯಾಂಚ್ ನ್ನು ಸಂಪರ್ಕಿಸಿ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಪ್ರಮುಖ ಇಬ್ಬರು ಆರೋಪಿಗಳನ್ನು ಬಂಧಿಸಿದಾಗ ಘಟನೆಯ ಮಾಹಿತಿ ದೊರೆತಿದೆ.
  ಸದ್ಯ ಮುಂಬೈ ಪೊಲೀಸರು ಶಾರ್ಜಾದ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ನಟಿ ಬಿಡುಗಡೆಗೆ ಪ್ರಯತ್ನಿಸುತ್ತಿದ್ದಾರೆ. ನಟಿ ಕ್ರಿಸಾನ್ ಪಿರೇರಾ ಅವರು ಸಡಕ್ 2 ಮತ್ತು ಬಾಟ್ಲಾ ಹೌಸ್‌ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ತಾಯಿ ಮಾಡಿದ ಗಲಾಟೆಗೆ ಮಗಳು ಜೈಲು ಸೇರುವಂತಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply