Connect with us

UDUPI

ಉಡುಪಿ ಜಿಲ್ಲೆ ಇಬ್ಬರು ವೈದ್ಯರು ಸೇರಿ 53 ಮಂದಿಗೆ ಕೊರೊನಾ

ಉಡುಪಿ ಜುಲೈ 15: ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತೆ 53 ಜನರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 1786ಕ್ಕೆ ಏರಿಕೆಯಾಗಿದೆ.


ಇಂದು ದಾಖಲಾದ ಪ್ರಕರಣಗಳಲ್ಲಿ ಕಾಪುವಿನಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ 7 ಮಂದಿ ಹಾಗೂ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ವೈದ್ಯರು ಮತ್ತು ನಾಲ್ವರು ಸಿಬ್ಬಂದಿಗಳಿಗೂ ಕೊರೊನಾ ಸೊಂಕು ತಾಗಿರುವುದು ದೃಢವಾಗಿದೆ. ಅಲ್ಲದೆ ಉಡುಪಿ ನಗರಸಭೆಯ ಇಬ್ಬರು ಸದಸ್ಯೆಯರಿಗೆ ಕೂಡಾ ಕೋವಿಡ್ ಸೋಂಕು ಪತ್ತೆಯಾಗಿದೆ.  ಇನ್ನು ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 1382 ಮಂದಿ ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 401 ಸಕ್ರಿಯ ಪ್ರಕರಣಗಳಿವೆ.