Connect with us

    LATEST NEWS

    ಪೋರ್ಚುಗಲ್ – ಹೊಳೆಯಂತೆ ರಸ್ತೆ ಮೇಲೆ ಹರಿದ ರೆಡ್ ವೈನ್….!!

    ಪೋರ್ಚುಗಲ್‌ ಸೆಪ್ಟೆಂಬರ್ 12: ಪೋರ್ಚುಗಲ್ ನ ರಸ್ತೆಯೊಂದರಲ್ಲಿ ವೈನ್ ನ ಹೊಳೆ ಹರಿದಿದೆ. ಸುಮಾರು 20 ಲಕ್ಷ ಲೀಟರ್ ರೆಡ್ ವೈನ್ ತುಂಬಿದ ಬ್ಯಾರೆಲ್ ಸ್ಪೋಟಗೊಂಡ ಪರಿಣಾಮ ರಸ್ತೆ ಮೇಲೆ ವೈನ್ ನ ಹೊಳೆಯೇ ಹರಿದಿದೆ.


    ಈ ಘಟನೆ ನಡೆದಿದ್ದು, ಪೋರ್ಚುಗಲ್‌ನ ಸಾವೊ ಲೊರೆಂಕೊ ಡಿ ಬೈರೊ ನಗರದಲ್ಲಿ ಕಂಡುಬಂದಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದ ವೈರಲ್ ಆಗಿದೆ. ‘ಲೆವಿರಾ ಡಿಸ್ಟಿಲರಿ’ ಎಂಬ ಕಂಪನಿಗೆ ಈ ವೈನ್‌ ಸೇರಿದ್ದು, ಸುಮಾರು 20 ಲಕ್ಷ ಲೀಟರ್‌ ವೈನ್‌ ಸಾಗಿಸಲು ಮುಂದಾಗಿತ್ತು. ಈ ವೇಳೆ ಅವಘಡ ಸಂಭವಿಸಿದ್ದು, ವೈನ್‌ ನದಿ ಸೃಷ್ಟಿಯಾಗಿದೆ.

    ಒಮ್ಮೆಲೆ ಕಡಿದಾದ ರಸ್ತೆಯಲ್ಲಿ ಬೃಹತ್ ಪ್ರಮಾಣ ಕೆಂಪು ನೀರು ಹರಿಯುತ್ತಿರುವುದನ್ನು ಕಂಡು ನಿವಾಸಿಗಳು ದಿಗ್ಭ್ರಮೆಗೊಂಡಿದ್ದಾರೆ. ಒಂದು ಒಲಂಪಿಕ್‌ನ ಈಜುಕೊಳ ತುಂಬಬಹುದಾದಷ್ಟು ವೈನ್‌ ರಸ್ತೆಯಲ್ಲಿ ಹರಿದು ಹೋಗಿದೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ. ಘಟನೆ ಸಂಬಂಧ ವೈನ್ ಕಂಪನಿ ಲೆವಿರಾ ಡಿಸ್ಟಿಲರಿ ಕ್ಷಮೆಯಾಚಿಸಿದೆ. ಹಾನಿಯ ಎಲ್ಲ ಖರ್ಚು–ವೆಚ್ಚಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply