FILM
ಆತ್ಮಹತ್ಯೆ ಮಾಡಿಕೊಂಡ 16 ವರ್ಷ ಪ್ರಾಯದ ಟಿಕ್ ಟಾಕ್ ಸ್ಟಾರ್

ಮುಂಬೈ : ಟಿಕ್ ಟಾಕ್ ಮೂಲಕ ಜನಪ್ರಿಯ ಆಗಿದ್ದ 16ರ ಪ್ರಾಯದ ಸಿಯಾ ಕಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಟಿಕ್ ಟಾಕ್ ವಿಡಿಯೋಗಳ ಮೂಲಕ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದ ಸಿಯಾ ಕಕ್ಕರ್ ಟಿಕ್ ಟಾಕ್ ನಲ್ಲಿ ಬರೋಬ್ಬರಿ 11 ಲಕ್ಷ ಫಾಲೋವರ್ಸ್ ಹೊಂದಿದ್ದರು. ಅವರ ಆತ್ಮಹತ್ಯೆ ಸುದ್ದಿ ಕೇಳಿ ಅನೇಕರು ಕಂಬನಿ ಮಿಡಿದಿದ್ದಾರೆ.
ಬಾಲಿವುಡ್ ನಲ್ಲಿ ಈಗಾಗಲೇ ಸುಶಾಂತ್ ರಜಪೂತ್ ಸಿಂಗ್ ಆತ್ಮಹತ್ಯೆ ಸುದ್ದಿ ಇನ್ನು ಬಿಸಿಬಿಸಿಯಾಗಿರುವಾಗಲೇ ಮತ್ತೊಂದು ಆತ್ಮಹತ್ಯೆ ಸುದ್ದಿ ಬಂದಿದೆ. ಬಾಲಿವುಡ್‌ನ ಫ್ಯಾಷನ್ ಫೋಟೋಗ್ರಾಫರ್ ವೈರಲ್ ಬಯಾನಿ ಅವರು ಈ ವಿಚಾರವನ್ನು ಬ್ರೇಕ್ ಮಾಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸಿಯಾ ಒಳ್ಳೆಯ ಮೂಡ್‌ನಲ್ಲೇ ಇದ್ದರು. ಏನೂ ತೊಂದರೆ ಇರಲಿಲ್ಲ. ಒಂದು ಹಾಡಿನ ಬಗ್ಗೆ ನಾವು ಕಳೆದ ರಾತ್ರಿ ಮಾತನಾಡಿದ್ದೆವು’ ಎಂದಿದ್ದಾರಂತೆ ಸಿಯಾ ಮ್ಯಾನೇಜರ್. ‘ಟಿಕ್ ಟಾಕ್‌ನಲ್ಲಿ ಅವರು ಒಳ್ಳೆಯ ಕಂಟೆಂಟ್‌ಗಳನ್ನೇ ಪೋಸ್ಟ್ ಮಾಡಿದ್ದಾರೆ. ಆದರೂ ಅವರು ಈ ರೀತಿ ಮಾಡಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ. ನೀವು ಖಿನ್ನತೆಗೆ ಒಳಗಾಗಿದ್ದರೆ ದಯವಿಟ್ಟು ಈ ರೀತಿ ಮಾಡಿಕೊಳ್ಳಬೇಡಿ’ ಎಂದು ಫೋಟೋಗ್ರಾಫರ್ ವೈರಲ್ ಬಯಾನಿ ಪೋಸ್ಟ್ ಮಾಡಿದ್ದಾರೆ.
ಸಿಯಾ ಕಕ್ಕರ್ ನಿಧನಕ್ಕೆ ಸಾವಿರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಕಾಮೆಂಟ್‌ಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ‘2020ರ ವರ್ಷಕ್ಕೆ ಏನಾಗಿದೆ? ಯಾಕೆ ಯುವ ಜನತೆ ಇಂಥ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.