LATEST NEWS
ದಕ್ಷಿಣ ಕೊರಿಯಾದಲ್ಲಿ ಕಾಲ್ತುಳಿತಕ್ಕೆ 151ಜನ ಮೃತ್ಯು
ಸಿಯೋಲ್, ಅಕ್ಟೋಬರ್ 30: ಹ್ಯಾಲೋವೀನ್ ಹಬ್ಬದಲ್ಲಿ ಭಾಗಿಯಾದವರಿಗೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 151ಕ್ಕೆ ಏರಿಕೆಯಾಗಿದ್ದು, ಗಾಯಾಳುಗಳ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ನಡೆಯುತ್ತಿದ್ದ ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ವೇಳೆ ಸ್ಥಳದಲ್ಲಿ ಜನಸಂಧಣಿ ಹೆಚ್ಚಾಗಿ ನೂಕುನುಗ್ಗಲು ಆರಂಭವಾಗಿದೆ.
ಒಂದಷ್ಟು ಮಂದಿ ಉಸಿರಾಟದ ಸಮಸ್ಯೆ ಎದುರಾಗಿ ಕುಸಿದುಬಿದ್ದಿದ್ದು, ಕಾಲ್ತುಳಿತವೂ ನಡೆಯಿತು. ಲೋವೀನ್ ಹಬ್ಬದಲ್ಲಿ ಹೆಚ್ಚಾದ ಜನಸಂದಣಿಯಿಂದಾಗಿ ಇಟಾವೊನ್‌ನ ಬೀದಿಗಳಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಸ್ಥಳೀಯ ಪೋಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಘಟನೆಯ ಬಗ್ಗೆ ನಡೆಸುತ್ತಿರುವ ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.
ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ ಎಂದು ಸಿಯೋಲ್‌ನ ಯೋಂಗ್ಸಾನ್ ಅಗ್ನಿಶಾಮಕ ವಿಭಾಗದ ಮುಖ್ಯಸ್ಥ ಚೋಯ್ ಸಿಯೋಂಗ್-ಬೀಮ್ ಹೇಳಿದ್ದರು. ಅಲ್ಲದೆ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್-ಯೋಲ್ ಅವರು ಹ್ಯಾಲೋವೀನ್ ಹಬ್ಬದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ಮಾತನಾಡುತ್ತಾ ಭಾನುವಾರ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದರು. ಸೂಪರ್ ಸ್ಟಾರ್ ರಜನಿಕಾಂತ್ ಭೇಟಿಯಾದ ಕಾಂತಾರದ ಶಿವ…..!!
ಅಪರಿಚಿತ ಸೆಲೆಬ್ರಿಟಿಯೊಬ್ಬರು ಅಲ್ಲಿಗೆ ಭೇಟಿ ನೀಡಿರುವುದನ್ನು ಕೇಳಿದ ನಂತರ ಹೆಚ್ಚಿನ ಸಂಖ್ಯೆಯ ಜನರು ಇಟಾವಾನ್ ಬಾರ್‌ಗೆ ಧಾವಿಸಿದ ನಂತರ ಈ ಘಟನೆ ಸಂಭವಿಸಿದೆ ಎಂದು ಕೆಲವು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಅಘಾತಗೊಂಡವರಿಗೆ ತ್ವರಿತ ಚಿಕಿತ್ಸೆಯನ್ನು ನೀಡಲು ಮತ್ತು ಹಬ್ಬದ ಸ್ಥಳಗಳ ಸುರಕ್ಷತೆಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್ನಲ್ಲಿ ನಡೆದ ಭೀಕರ ದುರಂತ ಪ್ರಕರಣ ಸಂಬಂಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಸಂತಾಪ ಸೂಚಿಸಿದರು. ಅಲ್ಲದೆ ದಕ್ಷಿಣ ಕೊರಿಯಾಗೆ ಅಗತ್ಯ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ.