Connect with us

LATEST NEWS

ಟಾಯ್ಲೆಟ್ ನ ನೆಕ್ಕಿಸಿ..ಕಮೋಡ್ ನಲ್ಲಿ ತಲೆ ಮುಳುಗಿಸಿದ್ದರು..ಮಗನ ನರಕಯಾತನೆ ಬಿಚ್ಚಿಟ್ಟ ತಾಯಿ – ಕೇರಳದಲ್ಲಿ ನಡೆದ ಭೀಕರ ರ‍್ಯಾಗಿಂಗ್

ಕೊಚ್ಚಿ ಜನವರಿ 02: ರ‍್ಯಾಗಿಂಗ್ ಪೆಡಂಭೂತಕ್ಕೆ ಇದೀಗ 15 ವರ್ಷದ ಬಾಲಕನೊಬ್ಬ ಜೀವ ಕಳೆದುಕೊಂಡಿದ್ದಾನೆ. ಎರಡು ವಾರಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ 15 ವರ್ಷದ ವಿಧ್ಯಾರ್ಥಿ ಸಾವಿಗೂ ಮುಂಚೆ ಆತ ಅನುಭವಿಸಿದ್ದ ನರಕಯಾತನೆಯನ್ನು ಆತನ ತಾಯಿ ಇದೀಗ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸದ್ಯ ಇಡೀ ಕೇರಳವೇ #JusticeforMihir ಎನ್ನುವ ಕೂಗಿನೊಂದಿಗೆ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಮಿಹಿರ್ ಜನವರಿ 15 ರಂದು ಶಾಲೆಯಿಂದ ಮರಳಿದ ಕೇವಲ ಒಂದು ಗಂಟೆಯ ನಂತರ ಕೊಚ್ಚಿಯ ತ್ರಿಪುಣಿತರಾದಲ್ಲಿನ ತಮ್ಮ 26 ನೇ ಮಹಡಿಯ ಫ್ಲಾಟ್‌ನಿಂದ ಜಿಗಿದ ಆತ್ಮಹತ್ಯೆ ಮಾಡಿಕೊಂಡಿದ್ದ.


ಎರ್ನಾಕುಲಂನ ತ್ರಿಪ್ಪುನಿಥುರಾದಲ್ಲಿರುವ ಸಿಬಿಎಸ್‌ಇ ಶಾಲೆಯಾದ ಗ್ಲೋಬಲ್ ಪಬ್ಲಿಕ್ ಸ್ಕೂಲ್‌ನಲ್ಲಿ9ನೇ ತರಗತಿ ಕಲಿಯುತ್ತಿದ್ದ ಮಿಹಿರ್ . ಮೇಲೆ ಆತನ ಸಹಪಾಠಿ ವಿಧ್ಯಾರ್ಥಿಗಳು ರಾಗಿಂಗ್ ಮಾಡಿದ್ದಾರೆ. ರ‍್ಯಾಗಿಂಗ್ ಯಾವ ಮಟ್ಟಕ್ಕೆ ಇತ್ತು ಎಂದರೆ ಅವನ ಸಹಪಾಠಿಗಳು ಅವನ ಮೈಬಣ್ಣದ ಮೇಲೆ ಅವನನ್ನು ಅಪಹಾಸ್ಯ ಮಾಡಿದರು ಮತ್ತು ಅವನನ್ನು ಟಾಯ್ಲೆಟ್ ನೆಕ್ಕಿಸಿದ್ದಾರೆ. ಅವನ ಮುಖವನ್ನು ಕಮೋಡ್ ಒಳಗೆ ಹಾಕಿದ್ದಾರೆ. ಅಲ್ಲದೆ ಆತ ಆತ್ಮಹತ್ಯೆ ಮಾಡಿಕೊಂಡ ಬಳಿಕವೂ ಕೂಡ ಅದನ್ನು ಸಂಭ್ರಮಿಸಿದ್ದಾರೆ.

ತನ್ನ ಮಗನ ಸಾವಿನ ಬಳಿಕ ಮಿಹಿರ್ ತಾಯಿ ಮಗನ ಸಾವಿಗೆ ನ್ಯಾಯಬೇಕೆಂದು ಸಿಎಂ ಹಾಗೂ ಪೊಲೀಸ್‌ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು. ಅಲ್ಲದೆ ಘಟನೆ ಹಿಂದಿನ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. ತನ್ನ ಮಗನ ಸಾವಿಗೆ ಕಾರಣವೇನು ಎನ್ನುವುದನ್ನು ತಾಯಿ ರಜ್ನಾ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿಕೊಂಡು ಬರೆದುಕೊಂಡಿದ್ದಾರೆ.

ಮಗನ ಮರಣದ ನಂತರ, ಮಿಹಿರ್ ಏಕೆ ಅಂತಹ ಕಠಿಣ ಹೆಜ್ಜೆಯನ್ನು ತೆಗೆದುಕೊಂಡಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನ್ನ ಪತಿ ಮತ್ತು ನಾನು ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸಿದೆವು. ಅವರ ಸ್ನೇಹಿತರು, ಸಹಪಾಠಿಗಳು ಮತ್ತು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಪರಿಶೀಲಿಸಿದೆವು. ಈ ವೇಳೆ ನಮಗೆ ಅವನು ಅನುಭವಿಸಿದ ಭಯಾನಕ ವಾಸ್ತವ ತಿಳಿಯಿತು. ಅವನು ಶಾಲೆಯಲ್ಲಿ ಮತ್ತು ಶಾಲಾ ಬಸ್‌ನಲ್ಲಿನ ವಿದ್ಯಾರ್ಥಿಗಳ ಗುಂಪಿನಿಂದ ಕ್ರೂರವಾಗಿ ರಾಗಿಂಗ್ ಒಳಗಾಗಿದ್ದ ಎಂದು ಮಿಹಿರ್ ತಾಯಿ ಆರೋಪಿಸಿದ್ದಾರೆ.

ನನ್ನ ಮಗನನ್ನು ಅವಾಚ್ಯವಾಗಿ ನಿಂದಿಸಲಾಗಿತ್ತು. ಅವನ ಕೊನೆಯ ದಿನವೂ ಊಹಿಸಲಾಗದ ಅವಮಾನವನ್ನು ಎದುರಿಸಿದ್ದ. ಅವನನ್ನು ಬಲವಂತವಾಗಿ ವಾಶ್ ರೂಂಗೆ ಕರೆದೊಯ್ದು, ಟಾಯ್ಲೆಟ್ ಸೀಟನ್ನು ನೆಕ್ಕುವಂತೆ ಮಾಡಿದ್ದರು. ಟಾಯ್ಲೆಟ್ ಫ್ಲಶ್ ಮಾಡುವಾಗ ತಲೆಯನ್ನು ಟಾಯ್ಲೆಟ್ ಕಮೋಡ್​ ಒಳಕ್ಕೆ ತಳ್ಳಲಾಗಿತ್ತು. ಈ ಕ್ರೌರ್ಯದ ಕೃತ್ಯಗಳು ಅವನನ್ನು ಕುಗ್ಗಿಸಿತ್ತು. ಈ ಎಲ್ಲಾ ಕಾರಣದಿಂದ ಅವನು ಈ ರೀತಿಯ ನಿರ್ಧಾರಕ್ಕೆ ಬಂದಿದ್ದ ಎಂದು ಮಿಹಿರ್‌ನ ತಾಯಿ ಆರೋಪಿಸಿದ್ದಾರೆ.

ಮಗನ ಸಾವಿನ ಬಳಿಕವೂ ಆತನ ಇನ್ಸ್ಟಾಗ್ರಾಮ್‌ ಖಾತೆಗೆ ಆಶ್ಲೀಲ ಮೆಸೇಜ್‌ ಕಳುಹಿಸಿ ಸಾವನ್ನು ಸಂಭ್ರಮಿಸಿದ್ದಾರೆ ಎಂದು ಬಾಲಕನ ತಾಯಿ ಹೇಳಿದ್ದಾರೆ. ಈ ಕುರಿತು ಸ್ಕ್ರೀನ್‌ ಶಾಟ್‌ ಹಂಚಿಕೊಂಡಿದ್ದಾರೆ.
ಶಾಲೆಯ ಉಪ ಪ್ರಾಂಶುಪಾಲರು ಮಿಹಿರ್‌ಗೆ ಕಿರುಕುಳ ನೀಡಿದ್ದಾರೆ ತಾಯಿ ಎಂದು ಆರೋಪಿಸಿದ್ದಾರೆ.

ಮಿಹಿರ್‌ನ ತಾಯಿ ಘಟನೆಯ ಕರಾಳ ಸತ್ಯವನ್ನು ಬಿಚ್ಚಿಟ್ಟ ಬಳಿಕ ಸಾಮಾಜಿಕ ಜಾಲತಾಣದಲ್ಲಿ#JusticeforMihir ಎನ್ನುವ ಕ್ಯಾಂಪೇನ್‌ ಶುರುವಾಗಿದೆ. ನಟಿಯರಾದ ಸಮಂತಾ, ಕೀರ್ತಿ ಸುರೇಶ್‌, ನಟ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ನೂರಾರು ಮಂದಿ ಮಿಹಿರ್‌ ಸಾವಿಗೆ ನ್ಯಾಯಬೇಕೆಂದು ಆಗ್ರಹಿಸಿದ್ದಾರೆ.

ಈ ಘಟನೆ ಸಂಬಂಧ ಸೂಕ್ತ ತನಿಖೆ ಆಗಬೇಕೆಂದು ಮಿಹಿರ್‌ನ ತಾಯಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿ ಮತ್ತು ಕೇರಳ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
ಕೊಚ್ಚಿಯಲ್ಲಿ 9ನೇ ತರಗತಿಯ ವಿದ್ಯಾರ್ಥಿ ಮಿಹಿರ್ ಅಹಮ್ಮದ್ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸ್ ತಂಡ, ಮಗು ಹಿಂದೆ ಓದಿದ ಶಾಲೆಯ ಉಪ ಪ್ರಾಂಶುಪಾಲರನ್ನು ವಿಚಾರಣೆಗೆ ಒಳಪಡಿಸಿದೆ.
ತ್ರಿಪುಣಿತುರಾದ ಹಿಲ್ ಸ್ಟೇಷನ್ ಪೊಲೀಸ್ ಠಾಣೆಯ ಎ.ಎಲ್.ಯೇಸುದಾಸ್ ನೇತೃತ್ವದ ತಂಡ, ಉಪ ಪ್ರಾಂಶುಪಾಲರನ್ನು ಠಾಣೆಗೆ ಕರೆಸಿದ ಬಳಿಕ ವಿಚಾರಣೆ ನಡೆಸಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *