DAKSHINA KANNADA
ಕಾರ್ತಿಕ್ ಹತ್ಯೆ ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ

ಕಾರ್ತಿಕ್ ಹತ್ಯೆ ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ
ಪುತ್ತೂರು ಸೆಪ್ಟೆಂಬರ್ 6: ಪುತ್ತೂರಿನ ಹಿಂದೂ ಜಾಗರಣೆ ವೇದಿಕೆ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಾಲ್ಕು ಜನ ಆರೋಪಿಗಳನ್ನು ಇಂದು ಪುತ್ತೂರಿನ ನ್ಯಾಯಲಯಕ್ಕೆ ಹಾಜರುಪಡಿಸಲಾಯಿತು.
ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ಮುಂದೆ ಆರೋಪಿಗಳಾದ ಪ್ರಿತೇಶ್ ,ಚರಣ್ ರಾಜ್ ಕಿರಣ್ ಹಾಗೂ ಸ್ಟೀವನ್ ಮೊಂತೇರೂ ರವನ್ನು ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಹಾಜರು ಪಡಿಸಲಾಯಿತು.

ನ್ಯಾಯದೀಶರು ಆರೋಪಿಗಳಿಗೆ 15 ದಿನಗಳ ನ್ಯಾಯಂಗ ಬಂಧನ ವಿಧಿಸಿದ್ದಾರೆ. ಆರೋಪಿಗಳ ಹಾಜರುಪಡಿಸುವ ಹಿನ್ನಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗು ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು.