LATEST NEWS
ಉಡುಪಿ 15 ಸಣ್ಣ ವಯಸ್ಸಿನ ಮಕ್ಕಳಿಗೆ ಕೊರೊನಾ ಸೊಂಕು
ಉಡುಪಿ 15 ಕಂದಮ್ಮಗಳಿಗೆ ಕೊರೊನಾ ಸೊಂಕು
ಉಡುಪಿ ಮೇ 21: ಉಡುಪಿಯಲ್ಲಿ ಕೊರೋನಾ ಮಹಾಸ್ಪೋಟ ಸಂಭವಿಸಿದೆ. ಇಂದು ಒಂದೇ ದಿನ 27 ಮಂದಿಗೆ ಕೊರೋನ ಪಾಸಿಟಿವ್ ದಾಖಲಾಗಿದ್ದು ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ 49ಕ್ಕೇ ಏರಿಕೆಯಾಗಿದೆ.
ದುಬೈ ಮತ್ತು ಮಹಾರಾಷ್ಟ್ರದಿಂದ ಬರುತ್ತಿರುವ ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಉಡುಪಿ ಜಿಲ್ಲೆಯ ಜನತೆಯ ಚಿಂತೆಗೆ ಕಾರಣವಾಗಿದ್ದು ಇಂದು ಒಂದೇ ದಿನ 27 ಪ್ರಕರಣಗಳು ಉಡುಪಿಯಲ್ಲಿ ದಾಖಲಾಗಿದೆ. ಅದರಲ್ಲಿ 16 ಮಂದಿ ಕಂದಮ್ಮಗಳಿಗೆ ಕೋವಿಡ್ 19 ಧೃಡಪಟ್ಟಿದ್ದು , ಮತ್ತೂ ಆತಂಕಕ್ಕೆ ಕಾರಣವಾಗಿದೆ.
ಇಂದು ಮುಂಬೈನಿಂದ ಬಂದ 23 ಮಂದಿಗೆ ಸೋಂಕು ದೃಢಪಟ್ಟಿದ್ದು ಎಲ್ಲರೂ ಕ್ವಾರಂಟೈನ್ ನಲ್ಲಿದ್ದವರಾಗಿದ್ದಾರೆ. ಅಲ್ಲದೆ ತೆಲಂಗಾಣ ದಿಂದ ಬಂದ 3 ಜನ ಹಾಗೂ ಕೇರಳದಿಂದ ಬಂದ ಒಬ್ಬರಿಗೆ ಕೊರೋನಾ ಸೊಂಕು ದೃಢಪಟ್ಟಿದೆ. ಸದ್ಯ ಎಲ್ಲಾ ಕೊರೊನಾ ಸೊಂಕಿತರನ್ನು ಹಂತ ಹಂತವಾಗಿ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ ಎಂದು ಉಡುಪಿ ಡಿ.ಎಚ್. ಒ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ.
ಇಂದು ಕೇವಲ ಜಿಲ್ಲೆಯ ಒಟ್ಟು199 ಜನರ ವರದಿ ಮಾತ್ರ ಬಂದಿದ್ದು, ಮುಂಬಯಿಂದ ಹಾಗೂ ದುಬೈಯಿಂದ ಉಡುಪಿಗೆ ಆಗಮಿಸಿದವರಿಂದ ಗುರುವಾರ ಮತ್ತಷ್ಟು ಕೊರೊನಾ ಪಾಸಿಟಿವ್ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಆರೋಗ್ಯ ಇಲಾಖೆಯಿಂದ ತಿಳಿದುಬಂದಿದೆ.