LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ 14 ಮಂದಿಗೆ ಕೊರೊನಾ ಸೊಂಕು

ದಕ್ಷಿಣಕನ್ನಡ ಜಿಲ್ಲೆಯಲ್ಲಿ 14 ಮಂದಿಗೆ ಕೊರೊನಾ ಸೊಂಕು
ಮಂಗಳೂರು ಮೇ.31 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 14 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ಪೈಕಿ 9 ಮಂದಿ ಮಹಾರಾಷ್ಟ್ರದಿಂದ ಆಗಮಿಸಿವರಿಗೆ ಸೋಂಕು ಕಾಣಿಸಿದ್ದರೆ, ಕತಾರ್ ದೇಶದಿಂದ ಮರಳಿದ 50 ವರ್ಷದ ವ್ಯಕ್ತಿ ಹಾಗೂ ಮಲೇಶ್ಯದಿಂದ ಆಗಮಿಸಿದ್ದ 42 ವರ್ಷದ ವ್ಯಕ್ತಿಯಲ್ಲೂ ಸೋಂಕು ಕಾಣಿಸಿದೆ.
ಇದಲ್ಲದೆ, ರೋಗಿ ಸಂಖ್ಯೆ ಪಿ – 2287 ಸಂಪರ್ಕದಿಂದ ಮತ್ತೆ ಮೂವರಲ್ಲಿ ಕೊರೊನಾ ಹರಡಿರುವುದು ದೃಢವಾಗಿದೆ. ಪಿ – 2287 ಮಂಗಳೂರಿನ ಬಜ್ಪೆ ನಿವಾಸಿ 46 ವರ್ಷದ ವ್ಯಕ್ತಿಯಾಗಿದ್ದು ಮೇ 27 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.

ಮೇ 8ರಂದು ಮುಂಬೈನಿಂದ ಬಂದು ಹೋಮ್ ಕ್ವಾರಂಟೈನ್ ಲ್ಲಿದ್ದ ವ್ಯಕ್ತಿಯ ಸಂಪರ್ಕದಿಂದ ಈಗ ಮತ್ತೆ ಮೂವರಿಗೆ ಕೊರೊನಾ ಹರಡಿದೆ. 17 ವರ್ಷದ ಬಾಲಕ, 31 ವರ್ಷದ ಯುವಕ ಹಾಗೂ 52 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಆಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ರೋಗಿಯ ಜೊತೆಗೆ ಮುಂಬೈನಿಂದ ಬಂದಿದ್ದ ಇತರೇ ಮೂರು ಮಂದಿಗೂ ಸೋಂಕು ಆಗಿ ಮೇ 27 ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಆತನ ಮನೆಯವರಿಗೂ ಸೋಂಕು ಹರಡುತ್ತಿದ್ದು ಬಜ್ಪೆ ಪ್ರದೇಶ ಸೀಲ್ ಡೌನ್ ಆಗುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 125 ಕ್ಕೆ ಏರಿದೆ. ಇದೇ ವೇಳೆ ಮಂಗಳೂರಿನ ಕೋವಿಡ್ ಆಸ್ಪತ್ರೆಯಿಂದ 9 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.