LATEST NEWS
23 ವಯಸ್ಸಿಗೆ 11 ಮದುವೆ!, ಇದು ಲವ್ಲಿ ಗಣೇಶನ ಪುರಾಣ…
ಚನ್ನೈ, ಜನವರಿ 16 : ಸರಿಯಾಗಿ ಒಂದು ಮದುವೆ ಆಗೋದಕ್ಕೆ ತಲೆ ಕೆಡಿಸಿ ಕೊಳ್ತಾರೆ, ಅಂತಾದ್ರಲ್ಲಿ ಇಲ್ಲೊಬ್ಬ ಯುವಕ ಮಾಡಿರುವ ಖತರ್ನಾಕ್ ಕೆಲಸವನ್ನು ಹೇಳಿದ್ರೆ ನೀವು ಖಂಡಿತ ಶಾಪ ಹಾಕುತ್ತೀರಾ. ಹೌದು. ಮಗುವಿನಂತೆ ಕಾಣುವ ಈ ಯುವಕ ಪ್ರೇಮದ ಹೆಸರಿನಲ್ಲಿ 11 ಜನರನ್ನು ಮದುವೆಯಾಗಿ ಮೋಸ ಮಾಡಿರುವ ಘಟನೆ ತಮಿಳುನಾಡಿನ ವಿಲ್ಲುವಾಕಂ ನಡೆದಿದೆ.
ಹುಡುಗಿಯರನ್ನು ಮೋಸ ಮಾಡಿ ಮದುವೆಯಾಗಿ ಮದುವೆಯಾದ ನಂತರ ದೈಹಿಕ ಬಯಕೆಗಳನ್ನು ಪೂರೈಸಿ, ಕೊಂಡು ನಂತರ ಒಬ್ಬರಿಂದ ಒಬ್ಬರಿಗೆ ತಿಳಿಯದಂತೆ ಇಲ್ಲಿ ತನಕ 11 ಮಂದಿಯನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ.
ತಮಿಳುನಾಡಿನ ರಾಜಧಾನಿ ಚೆನ್ನೈನ ವಿಲ್ಲಿವಾಕ್ಕಂ ನ ಲವ್ಲಿ ಗಣೇಶ್ (23) ಕೊಳತ್ತೂರುಮೂಲದ ಯುವತಿಯನ್ನು (20) ಪ್ರೀತಿಸಿ, ಕಳೆದ ವರ್ಷ ಡಿಸೆಂಬರ್ 5ರಂದು ಯುವತಿಯನ್ನು ಕರೆದುಕೊಂಡು ಹೋಗಿ ಮದುವೆ ಮಾಡಿಕೊಂಡಿದ್ದಾನೆ. ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಿಷಯ ತಿಳಿದ ಗಣೇಶ್, ಅತ್ತೆಯಿಂದ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದ. ಪೊಲೀಸರು ಎರಡೂ ಕಡೆಯುವರನ್ನು ಠಾಣೆಗೆ ಕರೆಸಿ ರಾಜೀ ಪಂಚಾಯ್ತಿ ಮಾಡಿದ್ದಾರೆ. ಈ ವೇಳೇ ಯುವತಿ ತನ್ನ ಪೋಷಕರ ಬಳಿ ಹೋಗಲು ನಿರಾಕರಿಸಿ. ಗಣೇಶ್ ಜೊತೆ ಸಂತೋಷದಿಂದ ಇದ್ದು, ಅವರೊಂದಿಗೆ ವಾಸಮಾಡುತ್ತೇನೆ ಎಂದು ಹೇಳಿದ್ದಾರೆ. ಮೇಜರ್ ಆಗಿದ್ದ ಕಾರಣ ಪೊಲೀಸರು ಏನೂ ಮಾಡಲು ಸಾಧ್ಯವಾಗಲಿಲ್ಲ.
ನಂತರ ಗಣೇಶ್ ತನ್ನ ಪತ್ನಿಯೊಂದಿಗೆ ವಿಲ್ಲಿವಾಕ್ಕಂನಲ್ಲಿ ಮನೆ ಯೊಂದನ್ನು ಬಾಡಿಗೆ ಪಡೆದು ವಾಸ ಮಾಡಲು ಶುರು ಮಾಡಿದ್ದಾನೆ. ಕೆಲವು ದಿನಗಳ ನಂತರ ಗಣೇಶ್, ಒಬ್ಬ ಯುವತಿಯನ್ನು ಮನೆ ಕೆಲಸ ಮಾಡಲು ಕರೆ ತರುತ್ತಾನೆ. ಇದೇ ವೇಳೆ ಗಣೇಶ್ ಮದುವೆಯಾಗಿದ್ದ ಯುವತಿ ನಾವಿಬ್ಬರೂ ಇದ್ದು. ನಮಗೆ ಮನೆ ಕೆಲಸದಾಕೆ ಯಾಕೆ? ಕೇಳಿದ್ದರು ಗಣೇಶ್ ಹೆಂಡತಿ ಮಾತನ್ನು ಕೇಳಿಲ್ಲ. ಈ ವೇಳೆ ಪತ್ನಿ ಕೆಲಸದಾಕೆ ನನ್ನು ಬೈದಿದ್ದಾಳೆ. ಇದು ಸಂಘರ್ಷಕ್ಕೆ ಕಾರಣವಾಗಿದೆ, ಇದೇ ವೇಳೆ ಗಣೇಶ್ ತನ್ನ ಹೆಂಡತಿಯನ್ನು ಹಿಂಸಿಸುತ್ತಿದ್ದ ಎನ್ನಲಾಗಿದೆ.
ಗಣೇಶ್ ಕೆಲಸದಾಕೆಯ ಜೊತೆ ಬೇರೆ ಕೋಣೆಯಲ್ಲಿ ಮಲಗುತ್ತಿದ್ದ ಎನ್ನಲಾಗಿದೆ. ಹೀಗಿರುವಾಗ ಸ್ನೇಹಿತರನ್ನು ಕರೆತಂದು ಮನೆಯಲ್ಲಿ ಮದ್ಯ ಸೇವಿಸುತ್ತಿದ್ದ ಎನ್ನಲಾಗಿದ್ದು, ಒಂದು ದಿನ ಗಣೇಶನ ಸ್ನೇಹಿತನೊಬ್ಬ ನಿನ್ನ ಹೆಂಡತಿಯೊಂದಿಗೆ ಮಾದಕವಾಗಿದ್ದಾಳೆ ಅಂತ ಹೇಳಿದ್ದಾನೆ. ಇದರಿಂದ ಹೆದರಿ ಜೋರಾಗಿ ಕೂಗಿಕೊಂಡ ವೇಳೆಯಲ್ಲಿ, ಮನೆಯಲ್ಲಿದ್ದ ಎಲ್ಲರೂ ಓಡಿಹೋಗಿದ್ದಾರೆ.
ತನ್ನ ಸ್ಥಿತಿ ಬಗ್ಗೆ ಮನೆಯ ಮಾಲೀಕರಿಗೆ ತಿಳಿಸಿ, ಆತನ ಸಹಾಯದಿಂದ ಮನೆ ತವರು ಮನೆಯನ್ನು ತಲುಪಿ ತನ್ನ ಪತಿ ವಿರುದ್ಧ ಆಕೆ ತನ್ನ ಪೋಷಕರೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆತನನ್ನು ಬಂಧಿಸಿ, ಅವರದೇ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಇದುವರೆಗೂ 11 ಹುಡುಗಿಯರನ್ನು ಮದುವೆಯಾಗಿದ್ದಾನೆ ಅಂಥ ಹೇಳಿದ್ದಾನೆ ಗಣೇಶ್ ಈತನ ವಿರುದ್ಧ ಪೊಲೀಸರು ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗಣೇಶ್ ನಿಂದ ವಂಚನೆಗೊಳಗಾದವರು ಯಾರೇ ಇರಲಿ, ದೂರು ನೀಡಿ, ಎಂದು ಚೆನ್ನೈ ಪೊಲೀಸರು ಹೇಳಿದ್ದಾರೆ.