LATEST NEWS
ಯೂಟ್ಯೂಬ್ ವಿಡಿಯೋಗಾಗಿ ಬಾಲಕರ ಕಿಡ್ನಾಪ್….!!
ಮಂಗಳೂರು ಜನವರಿ 16: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬಾಲಕರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳು ತಾವು ಯೂಟ್ಯೂಬ್ ಗೆ ವಿಡಿಯೋ ಮಾಡಲು ಈ ರೀತಿಯ ಕೃತ್ಯವನ್ನು ಎಸಗಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಮೂವರು ಬಾಲಕರು ಕೊಂಚಾಡಿ ಮಹಾಲಸಾ ದೇವಾಲಯದಿಂದ ಮನೆ ಕಡೆಗೆ ಹೋಗುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಯುವಕರು ಗೋಣಿಚೀಲ ಹಾಕಿ ಬಾಲಕರನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದರು. ಈ ಸಂದರ್ಭ ಒಬ್ಬ ಬಾಲಕ ಓಡಿ ತಪ್ಪಿಸಿಕೊಂಡಿದ್ದರೆ, ಇನ್ನೊಬ್ಬನನ್ನು ಹಿಡಿಯುವಾಗ ಸಾರ್ವಜನಿಕರು ಬಂದರೆಂದು ಬಾಲಕರನ್ನು ಬಿಟ್ಟು ಆರೋಪಿಗಳು ಓಡಿಹೋಗಿದ್ದರು. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಇದನ್ನು ಆಧರಿಸಿ ಕಂಕನಾಡಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದರು.
ಆ ವೇಳೆ ತನಿಖೆ ನಡೆಸಿದಾಗ ಮೂವರು ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತಾವು ಮೋಜಿಗಾಗಿ ಈ ಕೃತ್ಯ ಎಸಗಿದ್ದು, ಕಿಡ್ನಾಪ್ ಮಾಡುವ ದೃಶ್ಯಗಳನ್ನು ವಿಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಲು ಇದನ್ನು ಮಾಡಿರುವುದಾಗಿ ಹೇಳಿದ್ದಾರೆ. ಇನ್ನು ಕಿಡ್ನಾಪ್ ವೇಳೆ ತಪ್ಪಿಸಿಕೊಂಡ ಬಾಲಕ ಕೂಡಾ ಅಂದು ನಡೆದ ಕೃತ್ಯವನ್ನು ಮಾಧ್ಯಮದ ಮುಂದೆ ಹೇಳಿದ್ದಾನೆ. ಇನ್ನು ಕಿಡ್ನಾಪ್ ವೇಳೆ ತಪ್ಪಿಸಿಕೊಂಡ ಹಾಗೂ ಗೊಬ್ಬೆ ಹೊಡೆದು ಜನರನ್ನು ಸೇರಿಸಿ ಆರೋಪಿಗಳಿಂದ ಪರಾರಿಯಾದ ಬಾಲಕರ ದಿಟ್ಟ ನಡೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Facebook Comments
You may like
ಚಡ್ಡಿ ಕದ್ದು ಧರಿಸಿದ್ದಕ್ಕೆ ಸಹೋದ್ಯೋಗಿಯನ್ನು ಚಾಕುವಿನಿಂದ ಇರಿದು ಕೊಂದ!
ಸುರತ್ಕಲ್ ನ ಫೆರಾವೊ ಲಾಡ್ಜಿಂಗ್ & ಬೋರ್ಡಿಂಗ್ ನಲ್ಲಿ ವೇಶ್ಯಾವಾಟಿಕೆ ದಂಧೆ – ಇಬ್ಬರ ಬಂಧನ
ಅಕ್ರಮ ಮರಳುಗಾರಿಕೆ ತಡೆಯಲು ಸ್ವತಃ ಫಿಲ್ಡ್ ಗೆ ಇಳಿದ ಪೊಲೀಸ್ ಆಯುಕ್ತ
ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆದ ಹುಂಜ…!?
ಧರ್ಮಸ್ಥಳದ ಬಾಹುಬಲಿ ಬೆಟ್ಟದ ಕಾಡಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಮದುವೆ ಮಂಟಪವಾಗಿ ಬದಲಾದ ಜೈಲು…!
You must be logged in to post a comment Login