DAKSHINA KANNADA
ಮಂಗಳೂರು ಶ್ರೀ ವೆಂಕಟರಮಣ ದೇವಾಲಯ ಆಚಾರ್ಯ ಮಠ ವಠಾರದ 102ನೇ ಶ್ರೀ ಶಾರದಾ ಮಹೋತ್ಸವ ಸಮಾಪನ
ಮಂಗಳೂರು: ಶ್ರೀ ವೆಂಕಟರಮಣ ದೇವಾಲಯ ಆಚಾರ್ಯ ಮಠ ವಠಾರದ 102ನೇ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮ ಆಕ್ಟೋಬರ್ 8ರಿಂದ ಆರಂಭಗೊಂಡು 14 ರಂದು ಅತ್ಯಂತ ವೈಭವಯುತವಾಗಿ ನಡೆಯಿತು.
2 ವರ್ಷದ ಹಿಂದೆಯಷ್ಟೇ ನೂರನೇ ವರ್ಷದ ಶಾರದಾ ಮಹೋತ್ಸವವನ್ನು ಶ್ರೀ ಶಾರದಾ ಮಹೋತ್ಸವ ಸಮಿತಿ ಅತ್ಯಂತ ವೈಭವಪೂರ್ಣವಾಗಿ ನಡೆಸಿತ್ತು. ಅದೇ ರೀತಿ ಸಂಭ್ರಮದಿಂದ ಈ ಮಹೋತ್ಸವನ್ನು ಶ್ರಧ್ಧ ಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ.
ಮಂಗಳೂರು ನಗರ ಹಾಗೂ ಪರವೂರಿನ ಭಕ್ತಾದಿಗಳು ತನುಮನ ಸಹಾಯ ನೀಡಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ಸಿಗೊಳಿಸುತ್ತಿದ್ದಾರೆ. ಆ.9ರಂದು ಬೆಳಗ್ಗೆ 7 ಗಂಟೆಗೆ ಪ್ರತಿಷ್ಠಾಪನೆ ವೈದಿಕ ವಿಧಿ ವಿಧಾನಗಳೊಂದಿಗೆ ಶ್ರೀ ಮಾತೆಯ ವಿಗ್ರಹ ಪ್ರತಿಷ್ಠಾಪಿಸಲಾಯಿತು .
ಆ 13ವರೆಗೆ ದೀಪಾಂಲಕಾರ ಸಹಿತ ರಂಗಪೂಜೆ ನಡೆಯಿತು . ಆ13ರಂದು ಶ್ರೀ ಕಾಳಿಕಾ ದೇವಿಯ ವಿಶೇಷ ಅಲಂಕಾರ ಮಾಡಲಾಯಿತು .ಅಂದು ಬೆಳಗ್ಗೆ 10 ಘಂಟೆಗೆ ವಿದ್ಯಾರಂಭ ಕಾರ್ಯಕ್ರಮ ನಡೆದು , ಸಾರ್ವಜನಿಕ ಅನ್ನ ಸಂತರ್ಪಣೆಯೂ ನೆರವೇರಿತು .
ಅಂದು ಸಂಜೆ 6 ಗಂಟೆಗೆ ವಿಶೇಷ ದೀಪಾಲಂಕಾರ ಸೇವೆ ಜರಾಗಿದ್ದು ಸಹಸ್ರಾರು ಭಜಕರು ಪಾಲ್ಗೊಂಡು ಪುನೀತರಾದರು .
ಆ.14ರಂದು ಸಂಜೆ 5 ಗಂಟೆಗೆ ಶ್ರೀ ಶಾರದಾ ಮಾತೆಗೆ ಪೂರ್ಣಾಲಂಕಾರ ನಡೆದು ಚಿತ್ರಾ ಪುರ ಮಠ ಸಂಸ್ಥಾನದ ಪರಮ ಪೂಜ್ಯ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಗಳವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಶಾರದಾ ಮಾತೆಗೆ ಶ್ರೀ ಗಳವರ ಅಮೃತ ಹಸ್ತಗಳಿಂದ ಮಹಾ ಮಂಗಳಾರತಿ ನೆರವೇರಿತು . ಇತಿಹಾಸ ಪ್ರಸಿದ್ಧ ಮಂಗಳೂರು ಶಾರದೆಯ ವಿಸರ್ಜನಾ ಮೆರವಣಿಗೆಯಲ್ಲಿ ಚಿತ್ರಾ ಪುರ ಮಠ ಸಂಸ್ಥಾನದ ಪರಮ ಪೂಜ್ಯ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಗಳವರು ಸರಸ್ವತಿ ಕಲಾಮಂಟಪದಲ್ಲಿ ವಿರಾಜಮಾನರಾಗಿ ಶೋಭಾಯಾತ್ರೆಯ ವೈಭವವನ್ನು ವೀಕ್ಷಿಸಿದರು .
ಸಾಯಂಕಾಲ 4.30ಕ್ಕೆ ಸರಿಯಾಗಿ ಶ್ರೀಗಳಿಗೆ ಶ್ರೀ ವೆಂಕಟರಮಣ ದೇವಸ್ಠಾನದ ಆಡಳಿತ ಮಂಡಳಿ ಮತ್ತು ಶ್ರೀ ಶಾರದಾ ಮಹೋತ್ಸವ ಸಮಿತಿಯಿಂದ ಶ್ರೀಗಳವರಿಗೆ ಶ್ರೀ ದೇವಳದಲ್ಲಿ ಭವ್ಯ ಸ್ವಾಗತ, ಶ್ರೀ ದೇವರ ಭೇಟಿ, ಶ್ರೀ ಶಾರದಾ ಮಾತೆಯ ವಸಂತ ಮಂಟಪಕ್ಕೆ ಚಿತ್ತೈಸಿ ಶ್ರೀ ಶಾರದಾ ಮಾತೆಗೆ ಶ್ರೀ ಶ್ರೀಗಳ ದಿವ್ಯ ಹಸ್ತದಿಂದ ಮಾಹಾ ಆರತಿ, ಸಮಿತಿಯವತಿಯಿಂದ ಸ್ವಾಗತ, ಶ್ರೀ ಶ್ರೀಗಳಿಂದ ಅಶೀರ್ವಾದಪೂರ್ವಕ ಸಮಿತಿಯರಿಗೆ ಪ್ರಸಾದ ನೀಡಿದರು , ಉತ್ಸವ ಸ್ಥಾನದಿಂದ ಹೊರಡುವ ಮರವಣಿಗೆ ಶ್ರೀ ಮಹಾಮಾಯ ದೇವಾಲಯವಾಗಿ , ಕೆನರಾ ಹೈಸ್ಕೂಲಿನ ಹಿಂಬದಿಯಿಂದ ನವಭಾರತ್ ವೃತ್ತ ತಲುಪಿ ಅಲ್ಲಿಂದ ಡೊಂಗರಕೇರಿಯ ಮೂಲಕ ನ್ಯೂಚಿತ್ರಾ ಟಾಕೀಸ್ , ಬಸವನಗುಡಿ , ಚಾಮರಗಲ್ಲಿ , ರಥ ಬೀದಿಯಾಗಿ ಶ್ರೀ ಮಹಾಮಾಯಿ ತೀರ್ಥದಲ್ಲಿ ಜಲಸ್ತಾಂಭ ಗೊಳಿಸಲಾಯಿತು ಸಮಾಪನಗೊಂಡಿತು .
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಡಾ . ಉಮಾನಂದ ಮಲ್ಯ , ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ , ಪಂಡಿತ್ ನರಸಿಂಹ ಆಚಾರ್ಯ , ಜೋಡುಮಠ ಭಾಸ್ಕರ್ ಭಟ್ , ದತ್ತಾತ್ರೆಯ ಭಟ್ , ಗಣೇಶ್ ಬಾಳಿಗಾ , ಸುರೇಶ ಕಾಮತ್ , ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ , ಶಾಸಕ ವೇದವ್ಯಾಸ್ ಕಾಮತ್ , ನಂದನ್ ಮಲ್ಯ , ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್ವಾಲ್ ಹಾಗೂ ಸಾವಿರಾರು ಭಜಕರು ಪಾಲ್ಗೊಂಡು ಪುನೀತರಾದರು .
ಚಿತ್ರ : ಮಂಜು ನೀರೇಶ್ವಾಲ್ಯ