LATEST NEWS
ಭಾರತ – ನ್ಯೂಜಿಲೆಂಡ್ ಟೆಸ್ಟ್ – 10 ವಿಕೆಟ್ ಕಿತ್ತ ನ್ಯೂಜಿಲೆಂಡ್ ಸ್ಪಿನ್ನರ್ ಅಜಾಜ್ ಪಟೇಲ್
ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ಎಲ್ಲಾ ವಿಕೆಟ್ ಗಳನ್ನು ಪಡೆಯವ ಮೂಲಕ ನ್ಯೂಜಿಲೆಂಡ್ ನ ಸ್ಪಿನ್ನರ್ ಅಜಾಜ್ ದಾಖಲೆ ಬರೆದಿದ್ದಾರೆ.
ಮುಂಬೈನಲ್ಲಿ ನಡೆಯುತ್ತಿರುವ 2 ನೇ ಟೆಸ್ಟ್ ನ ಮೂರನೇ ದಿನವಾದ ಇಂದು ಅಜಾಜ್ ತನ್ನ ಸ್ವಿನ್ ಮೊಡಿ ಮಾಡಿದ್ದು, ಭಾರತದ ಎಲ್ಲಾ 10 ವಿಕೆಟ್ ಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಬರೋಬ್ಬರಿ 47.5 ಓವರ್ ಎಸೆದ ಅಜಾಜ್ ಪಟೇಲ್ 119 ರನ್ ನೀಡಿ ಎಲ್ಲಾ ಹತ್ತೂ ವಿಕೆಟ್ ಕಿತ್ತರು. ಈ ಮೂಲಕ 10 ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಈ ಮೊದಲು ಭಾರತದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಹಾಗೂ ಜಿನ್ ಲೇಕರ್ ಅವರು 10 ವಿಕೆಟ್ ಪಡೆದಿದ್ದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮಯಾಂಕ್ ಅಗರ್ವಾಲ್ ಅವರ ಅಮೋಘ ಶತಕ, ಅಕ್ಸರ್ ಪಟೇಲ್ ಸಮಯೋಚಿತ ಅರ್ಧಶತಗಳ ನೆರವಿನ ಹೊರತಾಗಿಯೂ 325 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಈ ಪತನದಲ್ಲಿ ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್ ರ ಅಬ್ಬರದ ಬೌಲಿಂಗ್ ಇತ್ತು. ಪಟೇಲ್ ಕೇವಲ 119 ರನ್ ನೀಡಿ ಭಾರತ ಎಲ್ಲ 10 ವಿಕೆಟ್ ಗಳನ್ನು ಕಬಳಿಸಿದರು. ಆ ಮೂಲಕ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ನ್ಯೂಜಿಲೆಂಡ್ ಪರವಾಗಿ ಆಡುತ್ತಿರುವ ಅಜಾಜ್ ಪಟೇಲ್ ಮೂಲತಃ ಮಹಾರಾಷ್ಟ್ರದವರಾಗಿದ್ದಾರೆ.