Connect with us

LATEST NEWS

ಮೊಮ್ಮಗಳನ್ನು ಅತ್ಯಾಚಾರಗೈದು 10ರೂ. ನೀಡಿದ ಅಜ್ಜ!

ಗೋರಖ್‌ಪುರ, ಮಾರ್ಚ್ 17: 15 ವರ್ಷದ ಮೊಮ್ಮಗಳನ್ನು ಅತ್ಯಾಚಾರ ಮಾಡಿದ ಆರೋಪದಲ್ಲಿ 60 ವರ್ಷದ ವ್ಯಕ್ತಿಯನ್ನು ಉತ್ತರ ಪ್ರದೇಶದ ಗೋರಖ್‌ಪುರ ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಸಂಜೆ ಸೊಸೆ ಮತ್ತು ಮೊಮ್ಮಗಳು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಜ್ಜ, ಸೊಸೆಯನ್ನು ಮನೆಗೆ ಹೋಗುವಂತೆ ಹೇಳಿದ್ದಾನೆ. ಅಲ್ಲದೇ ಕಟ್ಟಿಗೆ ಕಡಿಯಲು ಕೊಡಲಿ ತರುವಂತೆ ಮೊಮ್ಮಗಳಿಗೆ ತಿಳಿಸಿದ್ದಾನೆ.

ಮೊಮ್ಮಗಳು ಮನೆಗೆ ಹೋಗಿ ಕೊಡಲಿ ತಂದಾಗ, ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಈ ಬಗ್ಗೆ ಯಾರಿಗೂ ಹೇಳಬಾರದು ಎಂದು ಮೊಮ್ಮಗಳಿಗೆ 10 ರೂ. ನೀಡಿದ್ದಾನೆ.

ಈ ವೇಳೆ ಗ್ರಾಮಸ್ಥನೊಬ್ಬ ಕಂಡು, ಜನ ಸೇರಿಸಿ, ಅಜ್ಜನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಈ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *