LATEST NEWS
ವಿಶಾಖಪಟ್ಟಣಂನಲ್ಲಿ ದೈತ್ಯ ಕ್ರೇನ್ ಉರುಳಿ 11 ಮಂದಿ ಸಾವು

ಆಂಧ್ರಪ್ರದೇಶ ಅಗಸ್ಟ್ 1: ಆಂದ್ರಪ್ರದೇಶದಲ್ಲಿ ಕೊರೊನಾ ಜೊತೆಗೆ ಇತರ ಘಟನೆಗಳು ಜನರ ಜೀವ ತೆಗೆಯುತ್ತಿವೆ. ಇತ್ತೀಚೆಗಷ್ಟೇ ನಡೆದ ವೈಜಾಗ್ ನ ಗ್ಯಾಸ್ ದುರಂತ ಮಾಸುವ ಮುನ್ನವೇ, ಮತ್ತೊಂದು ಅನಾಹುತ ಸಂಭವಿಸಿ ಕನಿಷ್ಟ 11 ಮಂದಿ ಸಾವಿಗೀಡಾದ ಘಟನೆ ನಡೆದಿದೆ.
ವಿಶಾಖಪಟ್ಟಣಂನ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಈ ಘಟನೆ ನಡೆದಿದೆ.ದಿನ ನಿತ್ಯದಂತೆಯೇ ಇಂದೂ ಕೂಡ ಶಿಪ್ ಯಾರ್ಡ್ ನಲ್ಲಿ ಲೋಡ್ ಅನ್ ಲೋಡ್ ಕಾರ್ಯ ನಡೆಯುತ್ತಿದ್ದಾಗ ಇದ್ದಕಿದ್ದ ಹಾಗೆ ಕ್ರೇನ್ ಕುಸಿದು ಬಿದ್ದಿದೆ. ಈ ವೇಳೆ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಕ್ರೇನ್ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ಜಾರೆ. ಪ್ರಸ್ತುತ ಕ್ರೇನ್ ಅವಶೇಷಗಳನ್ನು ತೆರವುಗೊಳಿಸಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗಿದೆ.

ಕ್ರೇನ್ ನಡಿ ಸಿಲುಕಿದ್ದ ಹಲವಾರು ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಈವರೆಗೆ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಕ್ರೇನ್ ಉರುಳಿ ಬೀಳುವ ಈ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ADVERTISEMENT