Connect with us

LATEST NEWS

ಸೀತಾನದಿಯಲ್ಲಿ 1 ದಿನದ ಮಗುವಿನ ಮೃತದೇಹ ಪತ್ತೆ

ಬ್ರಹ್ಮಾವರ ನವೆಂಬರ್ 9: ಕೊಕ್ಕರ್ಣೆ ಸಮೀಪದ ಸೀತಾನದಿಯಲ್ಲಿ 1 ದಿನದ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.


ಪೆಜಮಂಗೂರು ಗ್ರಾಮದ ಗುಂಡಾಲು ಕಿಂಡಿ ಅಣೆಕಟ್ಟಿನ ಬಳಿ ಸೀತಾನದಿಯಲ್ಲಿ ನವಜಾತ ಶಿಶುವಿನ ಮೃತದೇಹ ನದಿನಲ್ಲಿತೇಲುತ್ತಿರುವುದು ಕಂಡು ಬಂದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಅದು 1 ದಿನದ ಗಂಡು ಮಗು ಎಂದು ತಿಳಿದು ಬಂದಿದೆ.

ಈ ಮಗು ಜನನ ತರುವಾಯ ಅಥವಾ ಜನನ ಕಾಲದಲ್ಲಿ ವಾರಿಸುದಾರರು ಮಗುವಿನ ಮೃತದೇಹವನ್ನು ರಹಸ್ಯವಾಗಿ ವಿಲೇಮಾಡುವ ಸಲುವಾಗಿ 2-3 ದಿನಗಳ ಹಿಂದೆ ಸೀತಾನದಿ ಹೊಳೆಯ ನೀರಿಗೆ ಎಸೆದಿರಬಹುದೆಂದು ಶಂಕಿಸಲಾಗಿದೆ. ಮುಖ ಹಾಗೂ ತಲೆಯ ಭಾಗ ಜಲಚರಗಳು ತಿಂದು ಕೊಳೆತ ಸ್ಥಿತಿಯಲ್ಲಿದ್ದು, ಅಲ್ಲದೇ ಮಗುವಿನ ಹೊಕ್ಕುಳ ಬಳ್ಳಿ ಕೂಡ ಮೃತದೇಹದೊಂದಿಗೆ ಇತ್ತು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *