LATEST NEWS
ವ್ಯಕ್ತಿಯ ಹೊಟ್ಟೆಯಲ್ಲಿ 150 ಮೊಳೆಗಳು, 263 ನಾಣ್ಯಗಳು

ವ್ಯಕ್ತಿಯ ಹೊಟ್ಟೆಯಲ್ಲಿ 150 ಮೊಳೆಗಳು, 263 ನಾಣ್ಯಗಳು
ಭೋಪಾಲ್. ನವೆಂಬರ್ 26: ಮಧ್ಯಪ್ರದೇಶದ ಭೋಪಾಲ್ ನಲ್ಲಿ ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ 150 ಮೊಳೆಗಳು ಹಾಗೂ 263 ನಾಣ್ಯಗಳು ಪತ್ತೆಯಾಗಿವೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 39 ವರ್ಷದ ವ್ಯಕ್ತಿಯನ್ನು ಶನಿವಾರ ಭೋಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರು ತಪಾಸಣೆ ನಡೆಸಿದಾಗ ಆತನ ಹೊಟ್ಟೆಯಲ್ಲಿ ಮೊಳೆಗಳು. ನಾಣ್ಯಗಳು ಹಾಗೂ ಇತರ ಕಬ್ಬಿಣದ ವಸ್ತುಗಳು ಪತ್ತೆಯಾಗಿವೆ. ಆಸ್ಪತ್ರೆಯ ವೈದ್ಯರು ಶತ್ರಚಿಕಿತ್ಸೆ ನಡೆಸಿ ಈ ಎಲ್ಲ ವಸ್ತುಗಳನ್ನು ಹೊರ ತೆಗೆದಿದ್ದಾರೆ. ಈತನ ಹೊಟ್ಟೆಯಲ್ಲಿ 150 ಕಬ್ಬಿಣದ ಮೊಳೆಗಳು, 263 ನಾಣ್ಯಗಳು, ನಾಯಿಯನ್ನು ಕಟ್ಟುವ ಸ್ಟೀಲಿನ ಹುಕ್ಕುಗಳು, ಸೂಜಿಗಳು ಹಾಗೂ ಇತರ ಕಬ್ಬಿಣದ ವಸ್ತುಗಳು ಪತ್ತೆ ಆಗಿವೆ. ಈತ ಮಾನಸಿಕ ಅಸ್ವಸ್ಥನೆಂದು ವೈದ್ಯರು ತಿಳಿಸಿದ್ದು ಕಳೆದ ಒಂದು ವರ್ಷದಿಂದ ಈತ ಕಬ್ಬಿಣದ ವಸ್ತುಗಳನ್ನು ನುಂಗುತ್ತಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
