DAKSHINA KANNADA
ಹೆದ್ದಾರಿ 75 ಕಾಮಗಾರಿ, ಸಂಸದರು ಗರಂ
ಮಂಗಳೂರು, ಆಗಸ್ಟ್ 29: ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಪಡೀಲ್ ಬಳಿ ಹೆದ್ದಾರಿ ರಸ್ತೆಯ ಕಾಮಗಾರಿಯ ವೀಕ್ಷಣೆ ಮಾಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಂಸದರ ಖಡಕ್ ಸೂಚನೆ ನೀಡಿದರು. ನಿಧಾನವಾಗಿ ಸಾಗುತ್ಇತಿರುವ ಕಾಮಗಾರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳನ್ನು ತೀವೃವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ಅತೀ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜೋರಾಗಿ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಸ್ವತ ಸಮಸದ ನಳಿನ್ ಕುಮಾರ್ ಕಟೀಲ್ ಹೆದ್ದಾರಿಯ ಕಾಮಗಾರಿಯ ವೀಕ್ಷಣೆ ನಡೆಸಿ ಅಧಿಕಾರಿಗಳಿಗೆ ಕೆಲವು ಸೂಚನೆ ನೀಡಿದರು. ಇಲ್ಲಿನ ಹೆದ್ದಾರಿಯ ರೈಲ್ವೇ ಮೇಲ್ಸೇತುವೆಯ ಬಳಿ ರೈಲ್ವೇ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ. ರೈಲ್ವೇ ಟ್ರ್ಯಾಕ್ ನ ಅಡಿಭಾಗದಲ್ಲಿ ಹೆದ್ಬಾದಾರಿಗೆ ಬಾಕ್ಸ್ ಕೂರಿಸುವ ಕಾರ್ಯ ನಡೆಯುತ್ತದೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಈ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಇನ್ನೂ ವಿಷಮಸ್ಥಿತಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ನಿರಂತರವಾಗಿ ಹೆದ್ದಾರಿ ಬ್ಲಾಕ್ ಆಗುತ್ತಿದ್ದು,ಇದರಿಂದ ಸುಗಮ ಸಂಚಾರಕ್ಕೆ ಭಾರಿ ತೊಂದರೆ ಆಗುತ್ತಿದೆ. ತುರ್ತು ಕಾರ್ಯ, ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದಾಗ ಅ್ಯಂಬುಲೆನ್ಸ್ ತೆರಳಲೂ ಇದರಿಂದ ತೊಂದರೆಯಾಗುತ್ತದೆ. ಕಿಲೋ ಮೀಟರ್ ಗಟ್ಟಲೇ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಲ್ಲಬೇಕಾಗ ಪರಿಸ್ಥಿತಿ ನಿರ್ಮಾಣವಾಗಿದೆ.ಇದು ಸಾರ್ವಜನಿಕರ ಟೀಕೆಗೆ ಕಾರಣವಾಗಿತ್ತು. ಸಚಿವ ರಮಾನಾಥ ರೈ,ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ, ಸಚಿವ ಯು.ಟಿ. ಖಾದರ್ , ಡಿ ವಿ. ಸದಾನಂದ ಗೌಡ ಸೇರಿದಂತೆ ಹೆಚ್ಚಿನ ವಿಐಪಿಗಳು ಇದೇ ಹೆದ್ದಾರಿಯಲ್ಲಿ ಸಾಗಬೇಕು. ಹಲವಾರು ಬಾರಿ ಗಂಟೆಗಟ್ಟಲೆ ಈ ಬ್ಲಾಕಿನಲ್ಲಿ ಸಿಲುಕಿ ನಿಗದಿತ ಕಾರ್ಯಕ್ರಮಗಳಿಗೆ ಸರಿಯಾಗಿ ತಲುಪಲು ಸಾಧ್ಯವಾಗದ ಪ್ರಮೇಯಗಳು ಹಲವಾರು ಬಾರಿ ಬಂದಿವೆ. ಈ ಬಾರಿ ಸಂಸದರೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ಕೂಡ ನೀಡಿದ್ದಾರೆ.ಇದರ ಫಲಿತಾಂಶಕ್ಕೆ ಕಾದುನೋಡಬೇಕಿದೆ.