Connect with us

    LATEST NEWS

    ನಾಟಿಕೋಳಿಗೆ ಪರ್ಯಾಯ ಕಾಡಾಕೋಳಿ

    ಮಂಗಳೂರು, ಆಗಸ್ಟ್ 29 : ನಾಟಿಕೋಳಿಗೆ ಪರ್ಯಾಯವಾಗಿ ಕರಾವಳಿಗೆ ಬಂದಿವೆ ಕಾಡಾಕೋಳಿ. ನೀವು ಊಹಿಸಿದಾಗೆ ಇದು ಕಾಡು ಕೋಳಿ ಅಲ್ಲವೇ ಅಲ್ಲ. ಇದರ ಹೆಸರೇ ಕಾಡಾ. ನೆರೆ ರಾಜ್ಯ ಕೇರಳದಲ್ಲಿ ಹೆಚ್ಚಾಗಿ ಮಾಂಸಕ್ಕಾಗಿ ಉಪಯೋಗಿಸುವ ಕಾಡಾ ಇದೀಗ  ದಕ್ಷಿಣ ಕನ್ನಡ ಜಿಲ್ಲೆಗೂ ಕಾಲಿಟ್ಟಿದೆ. ಮಂಗಳೂರು ನಗರದಲ್ಲೂ ಕಾಡಾ ಮಾಂಸ ಇದೀಗ ಲಭ್ಯ. ಈಗಾಗಲೇ ಅನೇಕರು ಕಾಡಾ ರುಚಿ ಸವಿದಿದ್ದಾರೆ. ಕೇರಳ ಗಡಿ ಭಾಗವಾದ ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನ ಕೆಲಭಾಗಗಳಲ್ಲಿ ಅತ್ಯಂತ ಲಾಭದಾಯಕ ಉದ್ಯಮವಾಗಿ ಕಾಡಾ ಸಾಕಣೆ ಮಾಡಲಾಗುತ್ತದೆ. ನೋಡಲು ನಾಟಿ ಕೋಳಿಯಂತಿರುವ ಈ ಕಾಡಾ ( ಕೋಳಿ) ಬಗ್ಗೆ ಹೆಚ್ಚಿನ ಜನರಿಗೆ ಪರಿಚಯವಿಲ್ಲ. ನಾಟಿ ಕೋಳಿ, ಬಾಯ್ಲರ್, ಟೈಸನ್, ಗಿರಿರಾಜ ಕೋಳಿ ನೋಡಿ ಅದರ ಮಾಂಸವನ್ನು ಸವಿದಿರುವ ಕರಾವಳಿ ಜನರು ಕಾಡಾ ರುಚಿ ನೋಡಿರುವುದು ಬಾರಿ ಕಡಿಮೆ. ಈ ಕಾಡಾಕೋಳಿ ಹೆಚ್ಚಾಗಿ ಕೇರಳದಲ್ಲಿ ಸಾಕಣೆ ಮಾಡುವ ಕಾಡುಕೋಳಿ ಜಾತಿಗೆ ಸೇರಿದ ಹಕ್ಕಿಯಾಗಿದೆ.ನಾಟಿ ಕೋಳಿಗಿಂತ ಗಾತ್ರದಲ್ಲಿ ಗಿಡ್ಡ ಹಾಗೂ ಕಾಡು ಕೋಳಿಗಿಂತ ತುಸು ಎತ್ತರ ಇರುವ ಕಾಡಾ ತೂಕ ಕಡಿಮೆ ಇದ್ದರೂ ಭಾರಿ ರುಚಿಕರ ಎಂದು ಹೇಳಲಾಗುತ್ತದೆ. ಕೇರಳದಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ಕಾಡಾ ಸಾಕಣೆ ಮಾಡುತ್ತಾರೆ. ಒಂದೊಂದು ಫಾರಂ ನಲ್ಲಿ ಲಕ್ಷಗಟ್ಟಲೆ ಕಾಡಾ ಕೋಳಿ ಸಾಕಣೆ ಮಾಡುತ್ತಾರೆ ಮತ್ತು ಇದರಿಂದ ಫಾರಂ ಮಾಲಕರು ಉತ್ತಮ ಆದಾಯ ಕೂಡ ಗಳಿಸುತ್ತಿದ್ದಾರೆ. ಒಂದು ಕಾಡಾ ಸರಾಸರಿ 250 ಗ್ರಾಂ ನಿಂದ 400 ಗ್ರಾಂ ವರೆಗೆ ತೂಕ ಬರುತ್ತಿದೆ. ಕಾಡ ಮಾಂಸದಲ್ಲಿ ಹೆಚ್ಚು ಪ್ರೋಟಿನ್ ಇದ್ದು ರುಚಿಕರ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದೆ. ಇದಕ್ಕೆ ಯಾವುದೇ ರೀತಿಯ ರೋಗ ನಿರೋಧಕ ಚುಚ್ಚು ಮತ್ತು ಅಥವಾ ಔಷಧಿ ನೀಡುವ ಅಗತ್ಯವಿಲ್ಲದರಿಂದ ಸಾಕಣಿಕೆ ವೆಚ್ಚಕೂಡ ತೀರ ಕಡಿಮೆ.ಕಾಡಾ ಕೋಳಿಯ ಮೊಟ್ಟೆ ಗೂ ಬಹಳ ಡಿಮಾಂಡ್ ಕಾರಣ ಇದರಲ್ಲಿರುವ ಔಷಧೀಯ ಗುಣಗಳು.ಮೊಟ್ಟೆ ಯೊಂದಕ್ಕೆ ಎರಡು ರೂಪಾಯಿನಿಂದ 3 ರೂಪಾಯಿಗಳ ವರೆಗೂ ಮಾರಾಟವಾಗುತ್ತಿದೆ. “ಒಂದು ಕಾಡಾ ದಿನವೂ ಮೊಟ್ಟೆ ಇಡುವುದರಿಂದ ಇದು ಲಾಭದಾಯಕವೂ ಆಗಿದೆ. 100 ಕೋಳಿಗಳಲ್ಲಿ ಶೇಕಡ 80 ರಷ್ಟು ಮೊಟ್ಟೆ ಇಡುತ್ತವೆ. ಕಾಡಾ ಕೋಳಿಯನ್ನು ಮಾರುಕಟ್ಟೆ ಅಂಗಡಿಗಳಲ್ಲಿ ತೂಕದ ಆಧಾರದಲ್ಲಿ ಮಾರಾಟ ಮಾಡುವುದು ಭಾರಿ ಕಡಿಮೆ ಬದಲಿಗೆ ಕೋಳಿ ಒಂದಕ್ಕೆ 60 ರೂಪಾಯಿಯಂತೆ ಮಾರಾಟ ಮಾಡುತ್ತೇವೆ “ಎನ್ನುತ್ತಾರೆ ಕಾಸರಗೋಡಿನ ಪವಿತ್ರ ಕುಮಾರ್. ನಿರ್ವಹಣಾ ಖರ್ಚು ಹೆಚ್ಚಾಗಿರುವ ಇತರ ಕೋಳಿ ಉದ್ಯಮಕ್ಕಿಂತ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭಗಳಿಸಬಹುದಾದ ಕಾಡಾ(ಕೋಳಿ)ಸಾಗಣಿಕೆ ಭವಿಷ್ಯದ ದಿನಗಳಲ್ಲಿ ಉತ್ತಮ ಉದ್ಯಮವಾಗಲಿದೆ.

    ವಿಡಿಯೋಗಾಗಿ ಒತ್ತಿರಿ..

    Share Information
    Advertisement
    Click to comment

    You must be logged in to post a comment Login

    Leave a Reply