BANTWAL
ತಾಕತ್ತಿದ್ದರೆ ಸುನ್ನತ್ ನಿಷೇಧಿಸಿ – ಕೆ.ಎಸ್ ಈಶ್ವರಪ್ಪ
ತಾಕತ್ತಿದ್ದರೆ ಸುನ್ನತ್ ನಿಷೇಧಿಸಿ – ಕೆ.ಎಸ್ ಈಶ್ವರಪ್ಪ
ಬಂಟ್ವಾಳ ನವೆಂಬರ್ 11: ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಬಂಟ್ವಾಳದಲ್ಲಿ ನಡೆಯುತ್ತಿರುವ ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಮೂಢನಂಬಿಕೆ ವಿರೋಧಿ ಕಾಯಿದೆಯಲ್ಲಿ ಸುನ್ನತ್ ನ್ನು ಸೇರಿಸಿ ಎಂದು ಹೇಳಿದರು.ಸುನ್ನತ್ ನಿಂದ ಮುಸ್ಲಿಂರಿಗೆ ನೋವಾಗುತ್ತದೆ, ನಿಮಗೆ ತಾಕತ್ ಇದ್ರೆ ಸುನ್ನತ್ ನಿಷೇಧಿಸಿ ಎಂದು ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಉಡುಪಿಗೆ ಬಂದು ಶ್ರೀಕಷ್ಣ ಮಠಕ್ಕೆ ಭೇಟಿ ಮಾಡದ ಬಗ್ಗೆ ಮಾತನಾಡಿದ ಅವರು ಸಿಎಂ ಅವರ ಕನಸಲ್ಲಿ ಶ್ರೀ ಕೃಷ್ಣ ಬಂದು ನನ್ನ ಕ್ಷೇತ್ರ ಕ್ಕೆ ಬಂದು ಅಪವಿತ್ರ ಮಾಡಬೇಡ ಎಂದು ಹೇಳಿರಬೇಕು ಹೀಗಾಗಿ ಅವರು ಶ್ರೀಕೃಷ್ಣ ಮಠಕ್ಕೆ ಕಾಲಿಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಶ್ರೀ ಕೃಷ್ಣನ ಮೇಲೆ ಆಣೆ ಮಾಡಿ ಹೇಳುತ್ತೇನೆ ಪರಮ ಭ್ರಷ್ಟಾಚಾರಿ ಡಿಕೆಶಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಡಿಕೆಶಿ ಶಿವಕುಮಾರ್ ಬಿಜೆಪಿ ಸೇರ್ಪಡೆ ವದಂತಿಗೆ ಸ್ಪಷ್ಟನೆ ನೀಡಿದರು.