LATEST NEWS
ಸಿಎಂ ಸಿದ್ದರಾಮಯ್ಯ ಅವರಿಂದ ಸಂವಿಧಾನ ಶಿಲ್ಪಿ ಗೆ ಅವಮಾನ – ಶೋಭಾ ಕರಂದ್ಲಾಜೆ
ಸಿಎಂ ಸಿದ್ದರಾಮಯ್ಯ ಅವರಿಂದ ಸಂವಿಧಾನ ಶಿಲ್ಪಿ ಗೆ ಅವಮಾನ – ಶೋಭಾ ಕರಂದ್ಲಾಜೆ
ಉಡುಪಿ ನವೆಂಬರ್ 26: ಸಂವಿಧಾನದ ದಿನದ ರಾಜ್ಯ ಸರಕಾರ ಪತ್ರಿಕೆಗಳಿಗೆ ನೀಡಿದ ಜಾಹಿರಾತು ಈಗ ವಿವಾದಕ್ಕೆ ಕಾರಣವಾಗಿದೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಪೋಟೋ ಇಲ್ಲದೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಪೋಟೋ ಸರ್ಕಾರದ ಜಾಹಿರಾತಿನಲ್ಲಿದ್ದು ಇದರ ವಿರುದ್ದ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪೋಟೋ ಇಲ್ಲದೆ ಜಾಹಿರಾತು ಮುದ್ರಣ ಮಾಡಿ ಅಂಬೇಡ್ಕರ್ ಅವರನ್ನು ಸಿಎಂ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ಸಿಎಂ ಸಿದ್ದರಾಮಯ್ಯ ತನ್ನ ಫೋಟೋ ಬಳಸಿ ಫುಲ್ ಪೇಜ್ ಜಾಹಿರಾತು ನೀಡಿದ್ದಾರೆ. ಆದರೆ ಅಂಬೇಡ್ಕರ್ ಅವರ ಒಂದು ಪೋಟೋ ಕೂಡ ಬಳಕೆಯನ್ನು ಮುಖ್ಯಮಂತ್ರಿಗಳು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ಇಂದು ಸಂವಿಧಾನ ಕೊಟ್ಟ ದಿನ, ತಾನೊಬ್ಬ ಅಹಿಂದ ಲೀಡರ್ ಅಂತ ಪೋಸ್ ಕೊಟ್ಟಿದ್ದಾರೆ, ಆದರೆ ಅಂಬೇಡ್ಕರ್ ಗಿಂತ ನೀವು ದೊಡ್ಡವರಾ? ಎಂದು ಪ್ರಶ್ನಿಸಿದ ಶೋಭಾ ಕರಂದ್ಲಾಜೆ ಅಂಬೇಡ್ಕರ್ ಗೆ ನಿರಂತರ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದು ಆರೋಪಿಸಿದರು. ಅಂಬೇಡ್ಕರ್ ಗೆ ಅವಮಾನ ಮಾಡಿದ ಸಿಎಂ ಸಿದ್ದರಾಮಯ್ಯ ಕೂಡಲೇ ರಾಜ್ಯದ ಜನತೆಯ ಕ್ಷಮೆ ಯಾಚಿಸಿಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರವೂ ಸಂವಿಧಾನದ ದಿನ ಜಾಹಿರಾತನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ಅವರ ಚಿಕ್ಕ ಪೋಟೋ ಬಳಸಲಾಗಿದ್ದು , ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ದೊಡ್ಡ ಪೋಟೋವನ್ನು ಜಾಹಿರಾತಿನಲ್ಲಿ ಬಳಸಲಾಗಿದೆ ಎಂದರು, ಪ್ರಧಾನಿ ನರೇಂದ್ರ ಮೋದಿ ಹುಲಿ ಇದ್ದಂತೆ ಎಂದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲಿ ಇದ್ದಂತೆ ಎಂದರು.