LATEST NEWS
ಧರ್ಮಸ್ಥಳ ಭೇಟಿಯ ಸಚಿತ್ರ ಪುಸ್ತಕ ಸ್ವೀಕರಿಸಿದ ಮೋದಿ

ಧರ್ಮಸ್ಥಳ ಭೇಟಿಯ ಸಚಿತ್ರ ಪುಸ್ತಕ ಸ್ವೀಕರಿಸಿದ ಮೋದಿ
ಮಂಗಳೂರು ಡಿಸೆಂಬರ್ 19: ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಧರ್ಮಸ್ಥಳ ಭೇಟಿ ಸಂದರ್ಭದ ಸವಿನೆನಪಿನ ಸಚಿತ್ರ ವರದಿಯ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಹಸ್ತಾಂತರಿಸಲಾಯಿತು.
ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಹೊತ್ತಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಪ್ರಧಾನಿಗೆ ಈ ಪುಸ್ತಕವನ್ನು ನೀಡಿದ್ದಾರೆ. ಧರ್ಮಸ್ಥಳ ದಿಂದ ರಚಿತವಾಗಿದ್ದು ಅಂದಾಕ್ಷಣ ಖುಷಿಯಿಂದ ಸ್ವೀಕರಿಸಿದ ಮೋದಿ ಸಂಪೂರ್ಣ ಓದುವುದಾಗಿ ಹೇಳಿದರು .ಕಳೆದ ಅಕ್ಟೋಬರ್ ನಲ್ಲಿ ಧರ್ಮಸ್ಥಳ ಕ್ಕೆ ಭೇಟಿ ನೀಡಿದ ಮೋದಿ ಶ್ರೀ ಕ್ಷೇತ್ರದಲ್ಲಿ ಹೆಗ್ಗಡೆ ಕುಟುಂಬದ ಆತಿಥ್ಯ ಸ್ವೀಕರಿಸಿ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.

ನಂತರ ಉಜಿರೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂಪೇ ಕಾರ್ಡ್ ಬಿಡುಗಡೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಧಾನಿಯ ಐತಿಹಾಸಿಕ ಭೇಟಿಯ ಪ್ರತಿಯೊಂದು ಕ್ಷಣವನ್ನು ಪುಸ್ತಕದಲ್ಲಿ ಸಚಿತ್ರ ವರದಿ ಮಾಡಲಾಗಿದ್ದು, ಈಗ ಸ್ವತಃ ನರೇಂದ್ರ ಮೋದಿಯವರಿಗೇ ನೆನಪಿನ ಉಡುಗೊರೆಯಾಗಿ ನೀಡಲಾಗಿದೆ.