LATEST NEWS
ದೇಶದ ಸಂವಿಧಾನ ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ – ಪೇಜಾವರ ಶ್ರೀ
ದೇಶದ ಸಂವಿಧಾನ ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ – ಪೇಜಾವರ ಶ್ರೀ
ಉಡುಪಿ ನವೆಂಬರ್ 25: ಜ್ಯಾತ್ಯಾತೀತ ವಾದಿಗಳು ಎಂದು ಹೇಳಿ ಕೊಳ್ಳುವವರು ಸಂಘವನ್ನು ದಲಿತ ವಿರೋಧಿಗಳು ಎಂದು ಬಿಂಬಿಸುತ್ತಿದ್ದಾರೆ ಎಂದು ಪೇಜಾವರ ವಿಶ್ವೇಶ ತೀರ್ಥ ಸ್ವಾಮಿಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಧರ್ಮಸಂಸದ್ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ಸಮಾಜದಲ್ಲಿರುವ ಅಸ್ಪೃಶ್ಯತೆ ನಿವಾರಣೆ ಯಾಗಬೇಕು ಎಂದು ಹೆಳಿದರು. ಜಾತಿ ಪದ್ದತಿ ವಿರೋಧ ಆಂದೋಲನ ಸಂಘದಿಂದಲೇ ಪ್ರಾರಂಭವಾಯಿತು ಎಂದು ತಿಳಿಸಿದರು. ದೇಶದ ಸಂವಿಧಾನ ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ ಎಂದು ಹೇಳಿದ ಅವರು ಸಂವಿಧಾನ ರಚನೆಯಲ್ಲಿ ಹಲವು ತಜ್ಞರು ಇದ್ದರು ಎಂದು ಅವರು ಅಭಿಪ್ರಯ ವ್ಯಕ್ತಪಡಿಸಿದರು.
ನಾನು ದಲಿತರಿಗೆ ಅವಮಾನ ಮಾಡಿಲ್ಲ. ಧಾರ್ಮಿಕ ಅಲ್ಪಸಂಖ್ಯಾತರಿಗೆ ಇರುವ ಸವಲತ್ತು ಧಾರ್ಮಿಕ ಬಹುಸಂಖ್ಯಾತರಿಗೂ ಸಿಗಬೇಕು. ಧರ್ಮದ ಆಧಾರದಲ್ಲಿ ಭೇದ ಮಾಡುವುದು ಬೇಡ ಎಂದು ಹೇಳಿದರು. ನನ್ನ ಮಾತಿಂದ ಅಂಬೇಡ್ಕರ್ ಗೆ ಹೇಗೆ ಅವಮಾನ ಆಗುತ್ತೆ ಎಂದು ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮಿ ಪ್ರಶ್ನಿಸಿದ್ದಾರೆ.
ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಅವರ ಶ್ರೀ ರಾಮ ಮಂದಿರ ನಿರ್ಮಾಣ ಸಂಧಾನ ಸೂತ್ರ ಯಾವ ರೀತಿ ಎಂಬುವುದು ಗೊತ್ತಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ದಲ್ಲಿರುವ ಸಮಸ್ಯೆ ಕೋರ್ಟ್ ನ ಹೊರಡಗೆ ಆದರೂ ಅಥವಾ ಕೋರ್ಟ್ ಮೂಲಕವಾದರೂ ಸಂತೊಷ. ಒಟ್ಟಿನಲ್ಲಿ ಶ್ರೀ ರಾಮ ಮಂದಿರ ಆಗಬೇಕು ಎಂದು ಅವರು ಸ್ಪಷ್ಟ ಪಡಿಸಿದರು.