LATEST NEWS
ವಿನಯ ಕುಮಾರ್ ಸೊರಕೆಯನ್ನು ಮುಸ್ಲೀಮರು ಬೆಂಬಲಿಸಲ್ಲ : ದ.ಕ.ಮುಸ್ಲಿಂ ಸಂಘಟನೆಗಳ ಒಕ್ಕೂಟ ನಿರ್ಣಯ

ವಿನಯ ಕುಮಾರ್ ಸೊರಕೆಯನ್ನು ಮುಸ್ಲೀಮರು ಬೆಂಬಲಿಸಲ್ಲ : ದ.ಕ.ಮುಸ್ಲಿಂ ಸಂಘಟನೆಗಳ ಒಕ್ಕೂಟ ನಿರ್ಣಯ
ಮಂಗಳೂರು, ಫೆಬ್ರವರಿ 19 :ಲೋಕ ಸಭಾ ಚುನಾವಣೆ ಆರಂಭವಾಗಲು ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳುತ್ತಿವೆ.
ಇದಕ್ಕೆ ಕರಾವಳಿ ಜಿಲ್ಲೆಗಳೂ ಹೊರತಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಆರಂಭವಾಗಿದೆ.

ಒಂದು ಕಡೆ 2 ಬಾರಿ ಸತತ ಆಯ್ಕೆಯಾದ ಸಂಸದ ನಳಿನ್ ಕುಮಾರ್ ಕಟೀಲಿಗೂ ಈ ಬಾರಿ ಟಿಕೆಟ್ ಲಭಿಸುವುದು ಅನುಮಾನವಾಗಿ ಕಾಡುತ್ತಿದೆ.
ಹೊಸ ಅಭ್ಯರ್ಥಿಯ ಹುಟುಕಾಟದಲ್ಲಿ ಬಿಜಪಿ ಇದ್ದರೆ ಇನ್ನೊಂದೆಡೆ ಕಾಂಗ್ರೆಸ್ ಕೂಡ ಈ ಬಾರಿ ಪ್ರಬಲ ಪೈಪೋಟಿಯಲ್ಲಿದ್ದು ಅರ್ಹ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಬಿಜೆಪಿಯ ಭಧ್ರ ಕೋಟೆಯನ್ನು ಉಡಾಯಿಸಲು ಕಾರ್ಯತಂತ್ರ ರೂಪಿಸುತ್ತಿದೆ.
ಮೂಲಗಳ ಪ್ರಕಾರ ಮಾಜಿ ಶಾಸಕ ಸಚಿವರಾದ ಬಿ ರಮಾನಾಥ ರೈ ಹಾಗೂ ಉಡುಪಿ ಮಾಜಿ ಸಂಸದ ಹಾಗೂ ಸಚಿವರಾದ ವಿನಯ ಕುಮಾರ್ ಸೊರಕೆಯ ನಡುವೆ ನೇರಾ ಸ್ಪರ್ಧೆ ಇದೆ.
ಈಗಾಗಲೇ ಇವರುಗಳ ಬಣ ಜಿಲ್ಲೆಯಲ್ಲಿ ಸಕ್ರೀಯವಾಗಿದ್ದು, ತನ್ನ ಚಟುವಟಿಕೆಗಳನ್ನು ಆರಂಭಿಸಿದೆ.
ಈ ಎಲ್ಲದರ ಮಧ್ಯೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ವಿನಯ ಕುಮಾರ್ ಸೊರಕೆ ಯವರನ್ನು ಕಣಕ್ಕೆ ಇಳಿಸಿದರೆ ಅವರನ್ನು ಬೆಂಬಲಿಸದಿರಲು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲೀಂ ಒಕ್ಕೂಟ ನಿರ್ಧರಿಸಿದ್ದು, ಹಲವು ಅಚ್ಚರಿಗಳಿಗೆ ಕಾರಣವಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಮುಸ್ಲೀಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಅಶ್ರಫ್ ಅವರು ವಿನಯ ಕುಮಾರ್ ಸೊರಕೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ದಿಂದ ಸ್ಪರ್ಧಿಸಲು ಪ್ರಾತಿನಿಧ್ಯ ಅಥವಾ ಅಭ್ಯರ್ಥಿ ತನ ನೀಡಿದ್ದೇ ಆದಲ್ಲಿ , ದ.ಕ.ಜಿಲ್ಲೆಯ ಸರ್ವ ಅಲ್ಪ ಸಂಖ್ಯಾತ ಮುಸ್ಲಿಮ್ ಸಮುದಾಯದ ಪ್ರತಿ ಮತದಾರರು ಈ ಅಭ್ಯರ್ಥಿ ಗೆ ಮತ ಚಲಾಯಿಸುವ ತಮ್ಮ ನಿರ್ಧಾರವನ್ನು ಖಂಡಿತ ವಾಗಿಯು ಪುನರ್ ವಿಮರ್ಶಿಸುತ್ತದೆ ,
ಈ ಅಭ್ಯರ್ಥಿಯು ಪ್ರತಿನಿಧಿ ಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಸಮುದಾಯ ತನ್ನ ನಿಷ್ಠೆಯನ್ನೂ ಕೂಡ ಪುನರ್ ನಿರ್ಧರಿಸಲಿದೆ , ಪ್ರಸ್ತುತ ಕಾಂಗ್ರೆಸ್ ಪಕ್ಷ ದಲ್ಲಿರುವ ಮುಸ್ಲಿಮ್ ಅಲ್ಪಸಂಖ್ಯಾತ ಜನ ಪ್ರತಿನಿಧಿ ಗಳು ಮತ್ತು ಮುಖಂಡರುಗಳು ಈ ಅಭ್ಯರ್ಥಿ ಯ ಬಗ್ಗೆ ಶೀಘ್ರ ತಮ್ಮ ನಿಲುವು ವ್ಯಕ್ತ ಪಡಿಸ ಬೇಕೆಂದು ಕೂಡ ಒಕ್ಕೂಟ ಅಪೇಕ್ಷಿಸುತ್ತದೆ ,
ಎಂದು ಹೇಳಿದ್ದು ವಿನಯ ಕುಮಾರ್ ಸೊರಕೆಯನ್ನು ಬೆಂಬಲಿಸದಿರಲು ದ.ಕ.ಜಿಲ್ಲಾ ಮುಸ್ಲಿಮ್ ಸಂಘಟನೆ ಗಳ ಒಕ್ಕೂಟ ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಿದೆ ಎಂದು ಹೇಳಿದ್ದಾರೆ.
ಆದರೆ ಅಂತಿಮ ನಿರ್ಧಾರ ಹೈಕಮಾಂಡಿನದಾಗಿದ್ದು, ಅವರು ಕೈಗೊಳ್ಳುವ ನಿರ್ಧಾರದ ಮೇಲೆ ಜಿಲ್ಲೆಯ ಕಾಂಗ್ರೆಸ್ ಭವಿಷ್ಯ ಅಡಕವಾಗಿದೆ.