ಸಂಸದ ನಳಿನ್ ಮಾತು ಸುಳ್ಳಿನ ಕಂತೆ : ಸಚಿವ ಯುಟಿ ಖಾದರ್

ಮಂಗಳೂರು, ಫೆಬ್ರವರಿ 19 : ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಜಿಲ್ಲೆ ಸಂಸದರು ಗೊಂದಲದಲ್ಲಿದ್ದಾರೆ. ನಾವೆಲ್ಲಿ ಫ್ಲೈಓವರ್ ನಲ್ಲಿ ಕಾಮಗಾರಿ ನಿಧಾನಿಸಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾರ ಕೈಯಲ್ಲಿದೆ ?

ಹೀಗೆಂದು ಸಂಸದ ನಳಿನ್ ಕುಮಾರ್ ಕಟೀಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ನೇರವಾಗಿ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಖಾದರ್ ಜನಪ್ರೀಯ ನಂಬರ್ ಒನ್  ಸಂಸದರು ಈ ಹಿಂದೆ ಯಾಕೆ ಹೇಳಿಕೆ ನೀಡಿಲ್ಲ ? ನಳಿನ್ ಮಾತು ಸುಳ್ಳಿನ ಮಾತು‌ ಅನ್ನೋದು ಜನತೆಗೆ ಗೊತ್ತಿದೆ. ತೊಕ್ಕೊಟ್ಟು ಪ್ಲೈಓವರ್ ಶುರು ಮಾಡಿ ಎಷ್ಟು ವರ್ಷ ಆಯಿತು? ಕೆಲಸ ಆರಂಭವಾದ ಮೇಲೆ ಮೇಲ್ಸೇತುವೆ ಕಾಮಾಗಾರಿಗೆ ಯಾರೂ ಅಡ್ಡಿಪಡಿಸಿಲ್ಲ ಎಂದ ಅವರು ಜವಾಬ್ದಾರಿಯುತ ಪ್ರತಿನಿಧಿಯಾಗಿ ಅವರು ಹೇಳಿಕೆಗಳನ್ನು ನೀಡಬೇಕು. ಸಂಸದನಾದರೆ ಕೆಲಸ ಮಾಡಿಸುವ ತಾಕತ್ತು ಬೇಕು. ಯಾವುದೇ ಕೆಲಸ ಮಾಡಬೇಕಾದರೆ ಲೆಕ್ಕಾಚಾರ ಇರಬೇಕು. ಸಂಸದನಾಗಿ ನಾಲ್ಕು ಗುಂಡಿ ಮುಚ್ಚಿಸಲು ಆಗಿಲ್ಲ, ಅದು ಬಿಟ್ಟು ವೃಥಾ ಆರೋಪ ಮಾಡುತ್ತಾರೆ. ರಾಜ್ಯ ಹೆದ್ದಾರಿಗಳು ನೋಡಿ ಎಷ್ಟು ಪರ್ಫೆಕ್ಟ್ ಆಗಿದೆ. ರಸ್ತೆಗಳಷ್ಟೇ ಪರ್ಫೆಕ್ಟ್ ನಮ್ಮ ಸರಕಾರವೂ ಇದೆ. ಸುರತ್ಕಲ್ ಟೋಲ್ ಗೇಟ್ ಸ್ಥಗಿತದ ಬಗ್ಗೆಯೂ ಮುಖ್ಯ ಕಾರ್ಯದರ್ಶಿ ಜೊತೆ ಮಾತಾಡಿದ್ದೇನೆ ಆದರೆ ಅಂತಿಮವಾಗಿ ಕೇಂದ್ರ ಸರಕಾರ ನಿರ್ಧಾರ ಕೈಗೊಳ್ಳಬೇಕಿದೆ. ಇದನ್ನು ಸಂಸದ ನಳಿನ್ ಕುಮಾರ್ ಅವರು ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

3 Shares

Facebook Comments

comments