Connect with us

LATEST NEWS

ಲಾರಿಯಲ್ಲಿದ್ದ ಅಡುಗೆ ಎಣ್ಣೆ ಬಾಕ್ಸ್ ಗಳನ್ನು ಲಪಟಾಯಿಸಿದ ಕಳ್ಳರು

ಲಾರಿಯಲ್ಲಿದ್ದ ಅಡುಗೆ ಎಣ್ಣೆ ಬಾಕ್ಸ್ ಗಳನ್ನು ಲಪಟಾಯಿಸಿದ ಕಳ್ಳರು

ಪುತ್ತೂರು ನವೆಂಬರ್ 28: ರಸ್ತೆ ಬದಿ ನಿಲ್ಲಿಸಿದ್ದ ಲಾರಿಯಿಂದ ನೂರಕ್ಕೂ ಮಿಕ್ಕಿದ ಎಣ್ಣಿ ಬಾಕ್ಸ್ ಕಳವುಗೈದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಉದನೆ ಎಂಬಲ್ಲಿ ನಡೆದಿದೆ.

ಇಂದು ಮುಂಜಾನೆ 2 ಗಂಟೆ ಸುಮಾರಿಗೆ ನಿದ್ದೆ ಮಂಪರಿಗೆ ಜಾರಿದ ಲಾರಿ ಚಾಲಕ ಉದನೆ ಸಮೀಪ ರಸ್ತೆಯ ಪಕ್ಕದಲ್ಲೇ ಲಾರಿ ನಿಲ್ಲಿಸಿ ನಿದ್ದೆ ಮಾಡಿದ್ದಾನೆ. ಮುಂಜಾನೆ 4 ಗಂಟೆಗೆ ಎದ್ದು ನೋಡಿದಾಗ ಲಾರಿಯ ಲೋಡ್ ಮುಚ್ಚಲು ಹಾಕಿದ ಟರ್ಪಾಲನ್ನು ಹರಿತವಾದ ಆಯುಧ ಬಳಸಿ ಹರಿದು ಲಾರಿಯೊಳಗೆ ನುಗ್ಗಿರುವ ಕಳ್ಳರು ನೂರಕ್ಕೂ ಮಿಕ್ಕಿದ ಎಣ್ಣೆ ಬಾಕ್ಸ್ ಗಳನ್ನು ಲಪಟಾಯಿಸಿದ್ದಾರೆ.

ಉಪ್ಪಿನಂಗಡಿ ಪೋಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಹೆದ್ದಾರಿ ದರೋಡೆ ಹಾಗೂ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಪೋಲೀಸ್ ಈ ಬಗ್ಗೆ ಗಮನ ಹರಿಸಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *