LATEST NEWS
ಲಂಚ ಪಡೆದ ಅಧಿಕಾರಿ ಆರೋಪ ಸಾಭೀತು ಶಿಕ್ಷೆ ಪ್ರಕಟಿಸಿದ ಲೋಕಾಯುಕ್ತ ಕೋರ್ಟ್
ಲಂಚ ಪಡೆದ ಅಧಿಕಾರಿ ಆರೋಪ ಸಾಭೀತು ಶಿಕ್ಷೆ ಪ್ರಕಟಿಸಿದ ಲೋಕಾಯುಕ್ತ ಕೋರ್ಟ್
ಮಂಗಳೂರು ನವೆಂಬರ್ 16: ಲಂಚಕ್ಕೆ ಬೇಡಿಕೆ ಇಟ್ಟು ಲಂಚ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದ ಅಧಿಕಾರಿಯ ಆರೋಪ ಸಾಭೀತಾಗಿದ್ದು ಮಂಗಳೂರು ಲೋಕಾಯುಕ್ತ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
ಖಾದಿ ಗ್ರಾಮೋದ್ಯೋಗದ ಅಧಿಕಾರಿ ಆಗಿದ್ದ ಭಾಸ್ಕರ್ ಪ್ರಭು ಸಹಾಯಧನ ಬಿಡುಗಡೆಗೆ ಕಡಬದ ಜೋನ್ಸನ್ ಪಿ. ಜೆ. ಎಂಬವರಿಂದ ಲಂಚದ ಬೇಡಿಕೆ ಇಟ್ಟಿದ್ದರು. ಗ್ರಾಮೋದ್ಯೋಗದ ಅಧಿಕಾರಿ ಆಗಿದ್ದ ಭಾಸ್ಕರ್ ಪ್ರಭು ಅವರು ಜೋನ್ಸನ್ ರಿಂದ ದಿನಾಂಕ 26-06-2009ರಂದು 10 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಲೋಕಾಯುಕ್ತ ಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ಮಂಗಳೂರು ಲೋಕಾಯುಕ್ತ ಕೋರ್ಟ್ ಭಾಸ್ಕರ್ ಪ್ರಭು ಅವರ ಮೇಲಿನ ಆರೋಪ ಸಾಭಿತಾದ ಹಿನ್ನಲೆಯಲ್ಲಿ ಇಂದು ಶಿಕ್ಷೆ ಪ್ರಕಟಿಸಿದೆ.
ಆರೋಪಿ ಭಾಸ್ಕರ್ ಪ್ರಭು ಈಗ ನಿವೃತ್ತಿ ಹೊಂದಿದ್ದಾರೆ ಅವರಿಗೆ ಸುಮಾರು 67 ವರ್ಷ ಪ್ರಾಯವಾಗಿದೆ. ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಳಿಧರ ಪೈ ಅವರು ಶಿಕ್ಷೆ ಪ್ರಕಟಸಿದ್ದಾರೆ, ಆರೋಪಿಗೆ ಕಲಂ 7 ರ ಅಡಿಯಲ್ಲಿ ಎಸಗಿದ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು 15,000/- ದಂಡ. ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು 15,000/- ದಂಡ ವಿಧಿಸಲಾಗಿದೆ.
ಆಗಿನ ಲೋಕಾಯುಕ್ತ ಇನ್ಸ್ಪೆಕ್ಟರ್ ಉದಯ ನಾಯಕ್ ಅವರ ನೇತೃತ್ವದಲ್ಲಿ ಆರೋಪಿಯನ್ನು ಬಂದಿಸಲಾಗಿತ್ತು. ಲೋಕಾಯುಕ್ತ ಪರವಾಗಿ ವಿಶೇಷ ಅಭಿಯೋಜಕ ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.