DAKSHINA KANNADA
ಮೂಡಬಿದ್ರೆ ಕಂಬಳದಲ್ಲಿ ಕೋಣಗಳಿಗೆ ಹಿಂಸೆ – ಪ್ರಾಣಿ ದಯಾ ಸಂಘ

ಮೂಡಬಿದ್ರೆ ಕಂಬಳದಲ್ಲಿ ಕೋಣಗಳಿಗೆ ಹಿಂಸೆ – ಪ್ರಾಣಿ ದಯಾ ಸಂಘ
ಮಂಗಳೂರು – ಸುಮಾರು ಒಂದುವರೆ ವರ್ಷದ ಬಳಿಕ ಮರುಹುಟ್ಟು ಪಡೆದ ಕಂಬಳಕ್ಕೆ ಆರಂಭದಲ್ಲೇ ವಿಘ್ನ ಎದುರಾಗುವ ಸಾದ್ಯತೆ ಇದೆ.
ಒಂದೂವರೆ ವರ್ಷದ ನಂತರ ನಡೆದ ಮೊದಲ ಕಂಬಳ ಮೂಡಬಿದಿರೆ ಕಡಲಕೆರೆ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಶನಿವಾರ ನಡೆದಿತ್ತು. ಈ ಕಂಬಳ ದಲ್ಲಿ ಸುಮಾರು 150ಕ್ಕೂ ಅಧಿಕ ಕೋಣಗಳು ಭಾಗವಹಿಸಿದ್ದವು. ಕಂಬಳ ನೋಡಲು ಅಂದಾಜಿನ ಪ್ರಕಾರ 10 ಸಾವಿರ ಜನ ಭಾಗವಹಿಸಿದ್ದರು ಎಂದು ಹೇಳಲಾಗಿದೆ.
ಈ ನಡುವೆ ಮೂಡಬಿದ್ರೆಯ ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗಿದೆ ಎಂದು ಪ್ರಾಣಿ ದಯಾ ಸಂಘ ಪೇಟಾ ಮತ್ತೆ ತಕರಾರು ಎತ್ತಿದೆ. ನಿನ್ನೆ ನಡೆದ ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗಿದ್ದು. ಮೂಡಬಿದ್ರೆ ಕಂಬಳದಲ್ಲಿ ಕೋಣಿಗಳಿಗೆ ಕೋಲಿನಿಂದ ಹೊಡೆಯಲಾಗಿದೆ. ಅಲ್ಲದೆ ಸುಮಾರು 100 ಕೋಣಗಳನ್ನು ಒತ್ತಾಯಪೂರಕವಾಗಿ ಕಂಬಳ ಗದ್ದೆಯಲ್ಲಿ ಓಡಿಸಲಾಗಿದೆ ಎಂದು ತಿಳಿಸಿದೆ. ಗಾಯಗೊಂಡ ಕೋಣಗಳನ್ನು ಹೊಡೆದು ಕಂಬಳ ಗದ್ದೆಯಲ್ಲಿ ಓಡಿಸಲಾಗಿದೆ ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಪೋಟೋ ಸಮೇತ ತಿಳಿಸಿದೆ.

ಇದಕ್ಕೆ ನಮ್ಮಲ್ಲಿ ಪ್ರಬಲ ಸಾಕ್ಷಿಯಿದೆ ಎಂದು ಪೇಟಾ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ, ಮೂಡಬಿದ್ರೆ ಕಂಬಳದಲ್ಲಿ ನಡೆದ ಹಿಂಸೆಯ ಬಗ್ಗೆ ಸಾಕ್ಷಿಯನ್ನು ನಾವು ಸುಪ್ರೀಂ ಕೋರ್ಟ್ ನೀಡುತ್ತೆವೆ ಎಂದು ಪೇಟಾ ಹೇಳಿದೆ. ರಾಜ್ಯ ಸರಕಾರದ ಆದೇಶ ವಿರುದ್ದ ನಾವು ಕೋರ್ಟ್ ನಲ್ಲಿ ಇದನ್ನು ಸಾಕ್ಷಿಯಾಗಿ ಬಳಸುತ್ತವೆ ಎಂದು ಪೇಟಾ ಹೇಳಿದೆ.