Connect with us

DAKSHINA KANNADA

ಮುಸ್ಲಿಮರಿಗೆ ಹಂದಿ ಸೇವಿಸಲು ಕರೆ ನೀಡಿದ ಹಿಂಜಾವೇ ಮುಖಂಡನನ್ನು ಬಂಧಿಸಿ-ಎಸ್.ಡಿ.ಪಿ.ಐ

ಮುಸ್ಲಿಮರಿಗೆ ಹಂದಿ ಸೇವಿಸಲು ಕರೆ ನೀಡಿದ ಹಿಂಜಾವೇ ಮುಖಂಡನನ್ನು ಬಂಧಿಸಿ-ಎಸ್.ಡಿ.ಪಿ.ಐ

ಪುತ್ತೂರು, ಎಪ್ರಿಲ್ 6 :ಗೋಮಾಂಸದ ಬದಲು ಹಂದಿ ಮಾಂಸ ಸೇವಿಸಲು ಅವಕಾಶ ನೀಡಿ ಎನ್ನುವ ಹೇಳಿಕೆ ನೀಡಿದ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ರಾಜ್ಯ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದೆ.

ಗೋಮಾಂಸ ಮುಸಲ್ಮಾನರ ಆಹಾರವಾಗಿದ್ದು, ಅದು ಅವರ ಆಹಾರದ ಹಕ್ಕು ಕೂಡಾ ಆಗಿದೆ. ಈ ಬಗ್ಗೆ ಮಾತನಾಡಲು ರಾಧಾಕೃಷ್ಣ ಅಡ್ಯಂತಾಯ ಯಾರು ಎಂದು ಪ್ರಶ್ನಿಸಿದ ಎಸ್.ಡಿ.ಪಿ.ಐ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಜಾಬೀರ್ ಅರಿಯಡ್ಕ ರಾಧಾಕೃಷ್ಣ ಅಡ್ಯಂತಾಯರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು.

ಸಮಾಜದಲ್ಲಿ ಹಿಂದೂ-ಮುಸ್ಲಿಮರ ನಡುವೆ ದ್ವೇಷ ಸಾಧಿಸುವಂತಹ ಹೇಳಿಕೆಗಳನ್ನು ನೀಡಿದ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳದೇ ಹೋದಲ್ಲಿ ಜಿಲ್ಲೆಯ ಸಾಮರಸ್ಯಕ್ಕೆ ಧಕ್ಕೆಯಾಗಬಹುದು.

ಇದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಈ ರೀತಿಯ ಹೇಳಿಕೆ ನೀಡಿರುವ ಹಿಂದೂ ಜಾಗರಣ ವೇದಿಕೆಯ ಮುಖಂಡರ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ದಕ್ಷಿಣಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲೂ ಎಸ್.ಡಿ.ಪಿ.ಐ ಈ ಬಾರಿ ಸ್ಪರ್ಧಿಸಲಿದ್ದು, ಕಾಂಗ್ರೇಸ್, ಬಿಜೆಪಿ ಹಾಗೂ ಜೆಡಿಎಸ್ ಸಮಾನ ಪ್ರತಿಸ್ಪರ್ಧಿಗಳು ಎಂದು ಅವರು ಸ್ಪಷ್ಟಪಡಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *