LATEST NEWS
ಉಡುಪಿ ಕಾಂಗ್ರೇಸ್ ನಾಯಕರ ಭಾವಚಿತ್ರವಿರುವ ಕಟೌಟ್ ತೆರವುಗೊಳಿಸದ ಚುನಾವಣಾ ಆಯೋಗ

ಉಡುಪಿ ಕಾಂಗ್ರೇಸ್ ನಾಯಕರ ಭಾವಚಿತ್ರವಿರುವ ಕಟೌಟ್ ತೆರವುಗೊಳಿಸದ ಚುನಾವಣಾ ಆಯೋಗ
ಉಡುಪಿ ಎಪ್ರಿಲ್ 5: ಚುನಾವಣಾ ನೀತಿ ಸಂಹಿತೆಯಿದ್ದರೂ ಸಿದ್ದರಾಮಯ್ಯ, ಆಸ್ಕರ್ ಫರ್ನಾಂಡಿಸ್, ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವು ಕಾಂಗ್ರೆಸ್ ಪ್ರಮುಖರ ಭಾವಚಿತ್ರವಿರುವ ಶಂಕುಸ್ಥಾಪನೆ ಕಟೌಟ್ ತೆರೆವು ಮಾಡದೆ ಚುನಾವಣಾಧಿಕಾರಿಗಳೇ ನಿಯಮ ಉಲ್ಲಂಘಿಸಿದ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ.
ಬ್ರಹ್ಮಾವರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಹೇರೂರು ಬಳಿಯ ಸುಪ್ರೀಂ ಫೀಡ್ಸ್ ಪಕ್ಕದಲ್ಲಿರುವ ಕಟ್ಟಡದ ಮೇಲೆ ಈ ಕಟೌಟ್ ಕಂಡುಬಂದಿದೆ. ಜನವರಿ 8ರಂದು ಬ್ರಹ್ಮಾವರಕ್ಕೆ ಸಿದ್ದರಾಮಯ್ಯ ಬಂದು ಹೋದ್ರೂ ಈಗ್ಲೂ ಕಟೌಟ್ ರಾರಾಜಿಸುತ್ತಿದೆ.

ಧಾರ್ಮಿಕ ಕಾರ್ಯಕ್ರಮ, ಖಾಸಗಿ ಕಾರ್ಯಕ್ರಮ, ಯಕ್ಷಗಾನ ಹೀಗೆ ಇಂತಹ ಕಾರ್ಯಕ್ರಮಗಳ ಮೇಲೆ ದಾಳಿ ಮಾಡುವ ಚುನಾವಣಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ರಾರಾಜಿಸುವ ಈ ಕಟೌಟ್ ಅಧಿಕಾರಿಗಳಿಗೆ ಕಾಣಿಸುತ್ತಿಲ್ಲವೇಕೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.