LATEST NEWS
ಮಾಜಿ ಕಾಂಗ್ರೇಸ್ ಮುಖಂಡನಿಂದ ರಮಾನಾಥ ರೈ ವಿರುದ್ದ ಭೂಕಬಳಿಕೆ ಆರೋಪ

ಮಾಜಿ ಕಾಂಗ್ರೇಸ್ ಮುಖಂಡನಿಂದ ರಮಾನಾಥ ರೈ ವಿರುದ್ದ ಭೂಕಬಳಿಕೆ ಆರೋಪ
ಮಂಗಳೂರು ನವೆಂಬರ್ 04:ಅರಣ್ಯ ಸಚಿವ ರಮಾನಾಥ್ ರೈ ಮೇಲೆ ಭೂ ಕಬಳಿಕೆಯ ಆರೋಪ ಕೇಳಿ ಬಂದಿದೆ. ರಮಾನಾಥ್ ರೈ ಪತ್ನಿ ಧನಭಾಗ್ಯ ರೈ, ಶೈಲಾ ಆರ್ ರೈ ಎಂದು ಹೆಸರು ಬದಲಿಸಿ ಮೂರುವರೆ ಎಕರೆ ಸರ್ಕಾರಿ ಭೂಮಿಯನ್ನು ಲಪಟಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರೈ ಫ್ಯಾಮಿಲಿ ಮೇಲೆ ಕೇಳಿ ಬಂದಿರುವ ಭೂಕಬಳಿಕೆಯ ಭಾರಿ ಚರ್ಚೆಗೆ ಗ್ರಾಸವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ್ ರೈ ಕುಟುಂಬದ ಮೇಲೆ ಭೂಕಬಳಿಕೆಯ ಗಂಭೀರ ಆರೋಪ ಕೇಳಿಬಂದಿದೆ. ಸ್ವತಃ ಕಾಂಗ್ರೆಸ್ ಉಚ್ಚಾಟಿತ ಹಿರಿಯ ಮುಖಂಡ ಹರಿಕೃಷ್ಣ ಬಂಟ್ವಾಳ ಈ ಆರೋಪವನ್ನು ಮಾಡಿದ್ದಾರೆ.

ಸಚಿವ ರಮಾನಾಥ್ ರೈ ಪತ್ನಿ ಧನಭಾಗ್ಯ ರೈ ಅವರು ಶೈಲಾ ಆರ್ ರೈ ಎಂದು ನಕಲಿ ಹೆಸರು ನೀಡಿ ದಾಖಲೆ ಸೃಷ್ಠಿಸಿ ಸರ್ಕಾರದ ಮೂರುವರೆ ಎಕರೆಯ ಅಕ್ರಮ ಸಕ್ರಮ ಭೂಮಿಯನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಂಟ್ವಾಳ ದ ಮಾಣಿ ಗ್ರಾಮದ ಸರ್ವೇ ನಂಬರ್ 20/2 ರಲ್ಲಿ 2.04 ಎಕರೆ ಸರ್ಕಾರಿ ಭೂಮಿಯನ್ನು ರಮಾನಾಥ್ ರೈ ಪತ್ನಿ ಧನಭಾಗ್ಯ ರೈ ನಕಲಿ ದಾಖಲೆ ನೀಡಿ ಪಡೆದುಕೊಂಡಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರಿ ಜಾಗವನ್ನು 94c ಅನ್ವಯ ಬಡವರಿಗೆ ಸಣ್ಣ ಪ್ರಮಾಣದಲ್ಲಿ ನೀಡಿದ್ರೆ ರಮಾನಾಥ್ ರೈ ಹೆಂಡತಿಗೆ ಮಾತ್ರ ಎಕರೆಗಟ್ಟಲೆ ಜಾಗ ನೀಡಲಾಗಿದೆ.
ರಾಜ್ಯಸರಕಾರದ ಮಂತ್ರಿಯೊಬ್ಬರ ವಾರ್ಷಿಕ ಆದಾಯ 6 ಸಾವಿರ ರೂಪಾಯಿ ಎಂದು ನಮೂದಿಸಿ ಸರಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ. ರಮಾನಾಥ್ ರೈ ವಿರುದ್ದ ನಿಂತಿರೋದ್ರಿಂದ ಕೊಲೆ ಬೆದರಿಕೆಗಳು ಬರುತ್ತಿದ್ದು ಇದಕ್ಕೆ ರಮಾನಾಥ್ ರೈ ಕುಮ್ಮಕ್ಕಿದೆ ಎಂದು ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ.