LATEST NEWS
ಮದುವೆಗೆ ಸಹಾಯ ಬೇಡಿ ಬಂದ ಮದುಮಗಳಿಗೆ ನೆರವು ನೀಡಿದ ಮೇಯರ್

ಮದುವೆಗೆ ಸಹಾಯ ಬೇಡಿ ಬಂದ ಮದುಮಗಳಿಗೆ ನೆರವು ನೀಡಿದ ಮೇಯರ್
ಮಂಗಳೂರು ನವೆಂಬರ್ 9: ಮದುವೆಗೆ ಸಹಾಯ ಬೇಡಿ ಬಂದ ಮದುಮಗಳಿಗೆ ಮೇಯರ್ ಸಹಿತ ಪಾಲಿಕೆ ಸದಸ್ಯರು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಡಿಸೆಂಬರ್ 3 ರಂದು ಮದುವೆಯಾಗಲಿರುವ ಮರೋಳಿಯ ಅನಿತಾ ಸಹಾಯ ಬೇಡಿ ಬಂದ ಹುಡುಗಿ. ಮದುಮಗಳ ಹುಡುಗಿಯ ತಂದೆ ನಿಧನರಾಗಿದ್ದು, ತಾಯಿ ಕೂಡ ಪಾರ್ಶ್ವವಾಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಈ ಪರಿಸ್ಥಿತಿಯಲ್ಲಿ ತಾಯಿ ಮಗಳ ಮದುವೆಗೆ ಏನೂ ಮಾಡಲಾಗ ಹೀನಾಯ ಸ್ಥಿತಿಯಲ್ಲಿದ್ದರು, ಇಂತಹ ಸಂಕಷ್ಟದಲ್ಲಿರುವ ಮದುಮಗಳು ಅನಿತಾ ಸಹಾಯಕ್ಕಾಗಿ ಮಂಗಳೂರು ಮೇಯರ್ ಅವರ ಮೊರೆ ಹೋಗಿದ್ದರು.

ಅನಿತಾ ಅವರ ಅಸಹಾಯಕ ಸ್ಥಿತಿಯನ್ನು ಕಂಡ ಮೇಯರ್ ಕವಿತಾ ಸನೀಲ್ ತಮ್ಮಿದಾಂದ ಸಹಾಯ ಮಾಡಲು ಮುಂದಾದರು, ಮೇಯರ್ 5 ಸಾವಿರ ರೂಪಾಯಿ ನೀಡಿದ್ದಲ್ಲದೆ ಪಾಲಿಕೆ ಅಧಿಕಾರಿಗಳ ಹಾಗೂ ಸದಸ್ಯರಲ್ಲಿ ತಮ್ಮಿಂದಾದ ಸಹಾಯ ಮಾಡಲು ಮನವಿ ಮಾಡಿದರು. ಮೇಯರ್ ಅವರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಹಾಗೂ ಸದಸ್ಯರು ತಮ್ಮಿಂದಾದ ಸಹಾಯ ನೀಡಿದರು. ಕೆಲವೇ ಗಂಟೆಗಳಲ್ಲಿ 42 ಸಾವಿರ ರೂಪಾಯಿಯಷ್ಟು ಹಣ ಸಂಗ್ರಹವಾಯಿತು. ಸಂಗ್ರಹವಾದ ಹಣವನ್ನು ಮೇಯರ್ ಅವರು ಮದುಮಗಳಿಗೆ ಹಸ್ತಾಂತರಿಸಿದರು.