LATEST NEWS
ಮಂಗಳೂರಿನಲ್ಲಿ ದಾಖಲೆ ರಹಿತ 15 ಲಕ್ಷ ಮೌಲ್ಯದ ಸೊತ್ತು ವಶ : ಇಬ್ಬರ ಬಂಧನ
ಮಂಗಳೂರಿನಲ್ಲಿ ದಾಖಲೆ ರಹಿತ 15 ಲಕ್ಷ ಮೌಲ್ಯದ ಸೊತ್ತು ವಶ : ಇಬ್ಬರ ಬಂಧನ
ಮಂಗಳೂರು, ಎಪ್ರಿಲ್ 12 : ದಾಖಲೆ ರಹಿತ 15 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಮಂಗಳೂರು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ನಗರದ ಪಂಪ್ ವೆಲ್ ಚೆಕ್ ಪೋಸ್ಟಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಕೇರಳ ಕಾಸರಗೋಡಿನಿಂದ ಮಂಗಳೂರು ನಗರಕ್ಕೆ ಬರುತ್ತಿದ್ಗ KL 60 A 5006 ನಂಬ್ರ ದ ಹೋಡಾ ಸಿಟಿ ಕಾರನ್ನು ತಪಾಸಣೆ ನಡೆಸಿದಾಗ ಈ ಸೊತ್ತುಗಳು ಪತ್ತೆಯಾಗಿವೆ.
ಸೊತ್ತುಗಳಲ್ಲಿ ವಿದೇಶಿ ನಿರ್ಮಿತ 12 ಲ್ಯಾಪ್ ಟಾಪ್, ಸಿಗರೇಟ್, ಎನರ್ಜಿ ಡ್ರಿಂಕ್ ಮತ್ತು ಆಹಾರ ಪದಾರ್ಥಗಳು, ಸುಗಂಧ ದ್ರವ್ಯ ಗಳು ಸೇರಿವೆ.
ಆದರೆ ಕಾರಿನಲ್ಲಿದ್ದವರು ಈ ಸೊತ್ತುಗಳ ದಾಖಲೆಗಳನ್ನು ನೀಡುವಲ್ಲಿ ವಿಫಲಾದ ಕಾರಣ ಸೊತ್ತಗಳ ಸಮೇತ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಚುನಾವಣೆ ದಿನಾಂಕ ಘೋಷಣೆ ಜತೆಗೇ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ರಾಜ್ಯ ಸಂಪರ್ಕ ಹೊಂದಿರುವ ಮಾರ್ಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ, ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳು ಎಲ್ಲ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ.
ನಿತ್ಯ ಮೂರು ಪಾಳಿಗಳಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರತಿ ವಾಹನದ ನೋಂದಣಿ ಸಂಖ್ಯೆ, ಚಾಲಕನ ದೂರವಾಣಿ ಸಂಖ್ಯೆ ಬರೆದುಕೊಳ್ಳುತ್ತಿದ್ದಾರೆ. ಗಡಿ ಭಾಗದಿಂದ ಅಕ್ರಮ ಹಣ, ಮದ್ಯ ಸಾಗಾಟದ ಕುರಿತು ನಿಗಾ ಇರಿಸಲಾಗಿದೆ.
ಅನುಮಾನಾಸ್ಪದ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಕಾಸರಗೋಡು ಜಿಲ್ಲೆಯ ಹಿರಿಯ ಪೋಲಿಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆ ಮಂಗಳೂರಿನಲ್ಲಿ ನಡೆಯಿತು.
ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರ ವರ್ತಿ, ನಗರ ಪೊಲಿಸ್ ಆಯುಕ್ತರಾದ ಟಿ. ಆರ್ ಸುರೇಶ್, ಕಾಸರಗೋಡು ಎಸ್ಪಿ ಸೈಮನ್, ದಕ್ಷಿಣ ಕನ್ನಡ ಎಸ್ಪಿ ರವಿಕಾಂತೇ ಗೌಡ ಸಹಿತ ಹಿರಿಯ ಪೋಲಿಸ್ ಅಧಿಕಾರಿಗಳು ಭಾಗವಹಿಸಿದ್ದರು.