BELTHANGADI
ಬಶೀರ್ ಸಾವಿಗೆ ಉಸ್ತುವಾರಿ ಸಚಿವ ರಮಾನಾಥ ರೈ ಸಂತಾಪ

ಬಶೀರ್ ಸಾವಿಗೆ ಉಸ್ತುವಾರಿ ಸಚಿವ ರಮಾನಾಥ ರೈ ಸಂತಾಪ
ಬೆಳ್ತಂಗಡಿ ಜನವರಿ 7: ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಬಶೀರ್ ಸಾವಿಗೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಮಾನಾಥ ರೈ ಈ ಹತ್ಯೆಗಳಲ್ಲಿ ಕಾಣದ ಕೈವಾಡ ಇದೆ ಎಂದು ಆರೋಪಿಸಿದರು. ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ಕೃತ್ಯಗಳು ನಡೆಯತ್ತಿದ್ದು ಕಾಂಗ್ರೇಸ್ ಸೋಲಿಸಲು ಈ ರೀತಿಯ ಹತ್ಯೆಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಹತ್ಯೆಗಳಲ್ಲಿ ಕಾಂಗ್ರೇಸ್ ನ ಪಾತ್ರ ಇಲ್ಲ ಎಂದು ಹೇಳಿದರು. ಸಂಘಪರಿವಾರದವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಜನರಲ್ಲಿ ಮತೀಯ ಭಾವನೆ ಕೆರಳಿಸುತ್ತಾರೆ ಎಂದು ರಮಾನಾಥ ಆರೋಪಿಸಿದರು. ಸಿಎಂ ಕಾರ್ಯಕ್ರಮ ಬಳಿಕ ಬಶೀರ್ ಮನೆಗೆ ಭೇಟಿ ನೀಡಲಿದ್ದೇನೆ ಎಂದು ರಮಾನಾಥ ರೈ ತಿಳಿಸಿದರು.
