Connect with us

    LATEST NEWS

    ಬಂಟರ ಭವನದ ಕಾರ್ಯಕ್ರಮದಲ್ಲಿ ಭೂತಾರಾಧನೆಗೆ ಅವಮಾನ

    ಬಂಟರ ಭವನದ ಕಾರ್ಯಕ್ರಮದಲ್ಲಿ ಭೂತಾರಾಧನೆಗೆ ಅವಮಾನ

    ಮಂಗಳೂರು ಡಿಸೆಂಬರ್ 25: ಪರುಶುರಾಮನ ಸೃಷ್ಠಿಯಾದ ತುಳುನಾಡಿಗೆ ತನ್ನದೇ ಆದ ಸಂಸ್ಕೃತಿ, ಆಚರಣೆ, ಸಂಪ್ರದಾಯಗಳಿವೆ. ಈ ತುಳುನಾಡಿನಲ್ಲಿ ಭೂತರಾಧನೆಗೆ ಪ್ರಮುಖ ಸ್ಥಾನ. ಇಲ್ಲಿಯ ಪ್ರತಿಯೊಂದು ಆಚರಣೆಗಳಲ್ಲಿ ದೈವರಾಧನೆ ಹಾಸುಹೊಕ್ಕಿದೆ.

    ಆದರೆ ದೈವರಾಧನೆಯ ಈ ಪವಿತ್ರ ಭೂಮಿಯಲ್ಲಿ ದೈವಾರಾಧನೆಯನ್ನೆ ಅಪಮಾನ ಮಾಡುವ ಪ್ರಸಂಗ ನಡೆದಿದೆ,

    ಮನರಂಜನೆಯ ಮರೆಯಲ್ಲಿ ಭೂತಾರಾಧನೆಯನ್ನು ಅಪಹಾಸ್ಯ ಮಾಡಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

    ಬಂಟ್ವಾಳದಲ್ಲಿ ವರ್ಷದ ಹಿಂದೆ ನಿರ್ಮಿಸಲಾಗಿದ್ದ ಬಂಟರ ಭವನದ ಪ್ರಥಮ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂತಾರಾಧನೆಯ ಬಗ್ಗೆ ವ್ಯಂಗ್ಯ ಮಾಡಲಾಗಿದೆ.

    ನಿನ್ನೆ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

    ಈ ಸಂದರ್ಭದಲ್ಲಿ ಭೂತಾರಾಧನೆಯ ಕುರಿತು ಪ್ರಸಂಗ ಒಂದನ್ನು ಪ್ರದರ್ಶಿಸಲಾಗಿತ್ತು.

    ಸ್ಟೇಜ್ ಮೇಲೆ ಪ್ರದರ್ಶಿಸಲಾದ ಈ ಪ್ರಸಂಗದಲ್ಲಿ ಭೂತಾರಾಧನೆಯನ್ನು ಪ್ರದರ್ಶಿಸಿದೆ ಇನ್ನೊಂದೆಡೆ ವಿದೇಶದಿಂದ ಬಂದ ಯುವಕನೋರ್ವ ಭೂತಾರಾಧನೆಯ ತಾಸೆ ತಾಳಕ್ಕೆ ಡಿಜೆ ನೃತ್ಯ ಪ್ರದರ್ಶಿಸುತ್ತಿದ್ದಾನೆ.

    ತುಳು ಪರಂಪರೆಯ ಭಾಗವಾದ ಭೂತಾರಾಧನೆಯನ್ನು ಆಧುನಿಕ ರಾಕ್ ಮ್ಯೂಜಿಕ್ ಗೆ ಹೋಲಿಸಿ ಭೂತಾರಾಧನೆಯ ಬಗ್ಗೆ ವ್ಯಂಗ್ಯ ಮಾಡಿರುವುದು ಭಾರಿ ವಿರೋಧಕ್ಕೆ ಕಾರಣವಾಗಿದೆ.

    ಭೂತಾರಾಧನೆಯ ಪೋಷಕರು ಎಂದು ಹೇಳಿಕೊಳ್ಳುವ ಬಂಟರ ಸಮ್ಮುಖದಲ್ಲೆ ಈ ಅಪಹಾಸ್ಯ ನಡೆದರೂ ಈ ಬಗ್ಗೆ ಸೊಲ್ಲೆತ್ತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

    ತುಳುನಾಡಿನ ಸಂಸ್ಕೃತಿ, ಪರಂಪರೆ, ಆಚರಣೆಯ ರಕ್ಷಕರೆಂದೆ ಬೀಗುವ ಬಂಟ ಸಮುದಾಯ ಭೂತಾರಾಧನೆಗೆ ಅವಮಾನ ಮಾಡಿದೆ ಎಂದು ದೂರಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಂಬರುವ ದಿನಗಳಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ.

    VIDEO

    Share Information
    Advertisement
    Click to comment

    Leave a Reply

    Your email address will not be published. Required fields are marked *