Connect with us

    LATEST NEWS

    ಬೃಹತ್ ಮಟ್ಟದ ಮಾದಕ ವಸ್ತು ಮಾರಾಟ ಜಾಲ ಪತ್ತೆ ಇಬ್ಬರ ಬಂದನ

    ಬೃಹತ್ ಮಟ್ಟದ ಮಾದಕ ವಸ್ತು ಮಾರಾಟ ಜಾಲ ಪತ್ತೆ ಇಬ್ಬರ ಬಂದನ

    ಮಂಗಳೂರು ಡಿಸೆಂಬರ್ 25: ಮಂಗಳೂರು ನಗರದಲ್ಲಿ ನಿಷೇದಿತ ಮಾದಕ ವಸ್ತಗಳಾದ ಎಲ್ ಎಸ್ ಡಿ , ಎಂ.ಡಿ ಎಂ.ಎ ಮತ್ತು ಎಂ ಡಿ ಎಂ ಟ್ಯಾಬ್ಲೆಟ್ ಗಳನ್ನು ಮಾರಾಟ ಮಾಡುತ್ತಿದ್ದ ಅಂತರಾಜ್ಯ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ.

    ಮಂಗಳೂರು ನಗರದಲ್ಲಿ ನಿಷೇದಿತ ಮಾದಕ ವಸ್ತಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಈ ಮೊದಲು 4 ಆರೋಪಿಗಳನ್ನು ಬಂಧಿಸಿದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಪ್ರಕರಣದಲ್ಲಿ ಇತರ ಆರೋಪಿಗಳಾಗಿದ್ದ ಡಿಕುನ್ಹ ಯಾನೆ ಅಸ್ಟಿನ್ ಹಾಗೂ ಅನೂಪ್ ಡಿ ಅಲ್ಮೇಡಾ ಎಂಬವರನ್ನು ಇಂದು ವಶಕ್ಕೆ ಪಡೆದಿದ್ದಾರೆ.

    ಬಂಧಿತರಿಂದ ಎಂ ಡಿ ಎಂ ಪೀಲ್ಸ್ -93, . ಹುಂಡೈ ಇಯಾನ್ ಕಾರು, 3 ಮೊಬೈಲ್ ಪೋನ್, 30850 ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ. ಈ ಮೇಲಿನ ಸ್ವಾದೀನ ಪಡಿಸಿಕೊಂಡ ಎಲ್ಲಾ ಸೊತ್ತುಗಳ ಮೌಲ್ಯ ರೂ 2,36,000/- ಆಗ ಬಹುದು. ಮೇಲ್ಕಂಡ ಆರೋಪಿಗಳಲ್ಲಿ ಕಾರ್ಲ್ ಎಂಬಾತನ ಮೇಲೆ 2014 ಮತ್ತು 2015 ಎನ್.ಸಿ.ಬಿ. ಬೆಂಗಳೂರು ಇಲ್ಲಿ ಪ್ರಕರಣಗಳು ದಾಖಲಾಗಿರುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply