LATEST NEWS
ಪ್ಲಾಸ್ಟಿಕ್ ಮೊಟ್ಟೆ ಆಯಿತು, ಇದೀಗ ಪ್ಲಾಸ್ಟಿಕ್ ಮೀನು ಮಾರುಕಟ್ಟೆಗೆ
ಮಂಗಳೂರು ಅಗಸ್ಟ್ 14: ಪ್ಲಾಸ್ಟಿಕ್ ಮೊಟ್ಟೆ ಆಯಿತು, ದಿನಾ ತಿನ್ನುವ ಅಕ್ಕಿ ಆಯಿತು ಇದೀಗ ಮತ್ತೊಂದು ಅಘಾತಕಾರಿ ಮಾಹಿತಿ ಹೊಬಂದಿದೆ.ಪ್ಲಾಸ್ಟಿಕ್ ಮೀನು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೋಡಲು ನಿಜ ಮೀನಿಯ ಆಕಾರಲ್ಲೇ ಇರುವ ಈ ನಕಲಿ ಪ್ಲಾಸ್ಟಿಕ್ ಮೀನು ಜೀವಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಫೋಮ್ ಬಳಸಿ ಮಾಡಲಾಗಿದೆ. ಇದನ್ನು ಸಂಸ್ಕರಿಸಿದ ಮೀನಿನ ರೂಪದಲ್ಲಿ ಫ್ರೋಜನ್ ಫುಡ್ ಐಟಂ ಆಗಿ ಇದನ್ನು ಮಾರಾಟ ಮಾಡಲಾಗುತ್ತದೆ.ತಾಜಾ ಮೀನಿನ ರೂಪದಲ್ಲಿ ಇದನ್ನು ತಯಾರು ಮಾಡಲು ತುಂಬಾನೇ ಖರ್ಚಿನ ಕೆಲಸ ಮತ್ತು ಮೀನಿನ ತಲೆ ಸೇರಿದಂತೆ ಇತರ ಅಂಗಾಂಗಗಳನ್ನು ಪುನರ್ ರಚಿಸುವುದು ಆರ್ಥಿಕ ದೃಷ್ಟಿಯಿಂದ ಲಾಭದಾಯಕ ಅಲ್ಲದಿರುವುದರಿಂದ ಸಂಸ್ಕರಿಸಿದ ಮೀನು ಪದಾರ್ಥದಲ್ಲಿ ಮೀನಿನ ತುಂಡುಗಳು ಮಾತ್ರ ಇರುವುದರಿಂದ ಇದನ್ನು ಗುರುತಿಸುವುದು ಅಷ್ಟು ಸುಲಭವಲ್ಲ.
ಅಫ್ರಿಕಾದ ದೇಶಗಳಲ್ಲಿ ಇದು ಮೊದಲು ಕಂಡು ಬಂದಿದ್ದು, ಇದೀಗ ಪ್ಲಾಸ್ಟಿಕ್ ಮೀನು ಭಾರತ ಮಾರಕಟ್ಟೆಗೂ ಲಗ್ಗೆ ಇಟ್ಟಿದೆ ಮುಂಬೈಯ ಮಾರುಕಟ್ಟೆಯಲ್ಲಿ ಇದು ಮೊದಲ ಬಾರಿಗೆ ಕಂಡು ಬಂದಿದೆ.
ನಗರ ಪ್ರದೇಶದ ಮಾಲ್ ಗಳಲ್ಲಿ ಶ್ರಿಮಂತ ವರ್ಗ ಹೆಚ್ಚಾಗಿ ಇಂತಹ ಸಂಸ್ಕರಿಸಿ ಶೀತಲೀಕರಣ ಮಾಡಿದ ಮೀನಿನ ಪದಾರ್ಥಗಳನ್ನೇ ಕೊಂಡುಕೊಳ್ಳುವುದರಿಂದ ಇದನ್ನು ಪತ್ತೆ ಹಚ್ಚುವುದು ಅಷ್ಟೊಂದು ಸುಲಭದಾಯಕವಲ್ಲ. ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಅಂ ಬೀರುವ ಕಲುಶಿತ ಹಾಗೂ ನಕಲಿ ಕಲಬೆರಕೆ ಅಹಾರ ಪದಾರ್ಥಗಳ ಸಾಲಿನಲ್ಲಿ ಇದೀಗ ಬಹು ಜನರ ಆಹಾರ ಪದಾರ್ಥವಾದ ಮೀನು ಕೂಡ ಸೇರಿರುವುದು ಆತಂಕಕಾರಿ ವಿಷಯವಾಗಿದ್ದು , ಇನ್ನು ಮುಂದೆ ಮೀನುಕೊಳ್ಳುವಾಗ ಕೂಡ ಜಾಗೃತೆ ವಹಿಸಬೇಕಾದ ಅಗತ್ಯವಿದೆ.