Connect with us

    DAKSHINA KANNADA

    ಪ್ರವೀಣನ ಕೈಯಲ್ಲಿ ಮೂಡಿ ಬಂತು ‘ ಗಣಪ’ ನವನವೀನ

    ಪುತ್ತೂರು, ಅಗಸ್ಟ್ 23 : ವಿಘ್ನ ನಿವಾರಕ ಗಣೇಶ ಚತುರ್ಥಿ ಬಂತಂತರೆ ಸಾಕು ಇಡೀ ವಿಶ್ವದಲ್ಲೇ ಸಂಭ್ರಮದ ವಾತಾವರಣ ಮೂಡುತ್ತದೆ. ಈ ಸಂದರ್ಭದಲ್ಲಿ ಹಲವು ಸಂಘ ಸಂಸ್ಥೆಗಳು ಗಣಪತಿಯ ವಿಗ್ರಹವನ್ನು ಸ್ಥಾಪಿಸಿ ಪೂಜೆ ನೆರವೇರಿಸುವುದು ಹಿಂದಿನಿಂದಲೂ ಬಂದ ಸಂಪ್ರದಾಯವೂ ಆಗಿದೆ. ಇಂಥದೇ ಸಂಪ್ರದಾಯವನ್ನು ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಲಾವಿದ ಒಬ್ಬರು ಆಚರಿಸಿಕೊಂಡು ಬರುತ್ತಿದ್ದಾರೆ. ಕಲಾ ಶಿಕ್ಷಕರಾಗಿ ತನ್ನ ವೃತ್ತಿಯನ್ನು ನಡೆಸುತ್ತಿರುವ ಪ್ರವೀಣ್ ವರ್ಣಕುಟೀರ ಅವರಿಗೂ, ಗಣೇಶನಿಗೂ ಏನೋ ಒಂದು ರೀತಿಯ ಅವಿನಾಭಾವ ಸಂಬಂಧ. ಬಿದಿರಿನ ಗಣಪತಿ, ಐಸ್ ಕ್ಯಾಂಡಿ ಕಡ್ಡಿಯ ಗಣಪತಿ, ಫೋಮ್ಸ್ ಗಣಪತಿ, ಪೆನ್ಸಿಲ್ ಮೊನೆಯಲ್ಲಿ ಗಣಪತಿ, ಬೆಂಕಿಕಡ್ಡಿಯಲ್ಲಿ ಗಣಪತಿ ಹೀಗೆ ಎಲ್ಲಾ ರೀತಿಯ ವಸ್ತುಗಳನ್ನು ಬಳಸಿ ಅತ್ಯಂತ ನಾಜೂಕಾದ ವಿವಿಧ ವಸ್ತುಗಳನ್ನು ಬಳಸಿ ಗಣಪತಿಯ ಕಲಾಕೃತಿಯನ್ನು ಮಾಡುವ ಮೂಲಕ ಹೆಸರುವಾಸಿಯಾಗಿದ್ದಾರೆ. ಗಣೇಶ ಚತುರ್ಥಿ ಬಂತೆಂದರೆ ಸಾಕು ವಿಭಿನ್ನ ರೀತಿಯ ಗಣೇಶನ ಕಲಾಕೃತಿ ನಡೆಸುವ ಮೂಲಕ ಗಣೇಶನನ್ನು ಒಲಿಸಿಕೊಳ್ಳುವುದು ಇವರ ಪ್ರಯತ್ನ ಆರಂಭ. ಈ ಬಾರಿ ಪ್ರವೀಣ್ ಕೈಯಲ್ಲಿ ಮೂಡಿಬಂದಿರುವುದು ಕ್ರಾಫ್ಟ್ ಶೀಟ್ ನ ಗಣಪತಿ. ಬೇರೆ ಕಾರ್ಯಕ್ಕೆ ಉಪಯೋಗಿಸಿ ಉಳಿದ ಕ್ರಾಫ್ಟ್ ಶೀಟನ್ನು ಬಳಸಿ ಸುಂದರವಾದ ಗಣಪತಿಯ ಕಲಾಕೃತಿಯನ್ನು ರಚಿಸಿದ್ದು, ಅದಕ್ಕೆ ಇನ್ನಷ್ಟು ಮೆರಗು ನೀಡುವ ಉದ್ಧೇಶದಿಂದ ಅವುಗಳಿಗೆ ಹೊಳೆಯುವ ಕಲ್ಲುಗಳನ್ನೂ ಜೋಡಿಸಿದ್ದಾರೆ. ಪ್ರತಿವರ್ಷವೂ ಗಣೇಶ ಚತುರ್ಥಿಯಂದು ಭಿನ್ನವಾದ ಕಲಾಕೃತಿ ತಯಾರಿಸಬೇಕೆಂಬ ಬಯಕೆಯ ಪ್ರವೀಣ್ ಗೆ ಈ ಬಾರಿ ಕ್ರಾಫ್ಟ್ ಶೀಟ್ ಗಣಪತಿಯ ಮೂಲಕ ಗಮನ ಸೆಳೆದಿದ್ದಾರೆ.
    ಕೇವಲ ತಾನೇ ಕಲಾಕೃತಿಯನ್ನು ತಯಾರಿಸದೆ, ತಮ್ಮಲ್ಲಿ ಬರುವ ಕಲಾ ವಿದ್ಯಾರ್ಥಿಗಳಿಗೂ ಅದನ್ನು ತಿಳಿಸುವ ಕಾರ್ಯದಲ್ಲಿ ಪ್ರವೀಣ ವರ್ಣಕುಟೀರ ಸದಾ ನಿರತರಾಗಿದ್ದಾರೆ. ಅತ್ಯಂತ ನಾಜೂಕಿನ ಕಲೆಯನ್ನೇ ಛಾಲೆಂಜ್ ಆಗಿ ತೆಗೆದುಕೊಂಡು ಅದನ್ನು ಅತ್ಯಂತ ಸುಂದರವಾಗಿ ಪ್ರಸ್ತುತಪಡಿಸುವ ಇವರು ವಿಶಿಷ್ಟ ಗಣಪತಿಯ ಕಲಾಕೃತಿ ತಯಾರಿಸುವವರ ಸಾಲಿನಲ್ಲಿ ಸೇರುತ್ತಾರೆ. ಪರಿಸರಕ್ಕೆ ಹಾನಿಯಾಗುವ ಯಾವುದೇ ವಸ್ತುಗಳನ್ನು ಬಳಸದೆ, ಪರಿಸರಸ್ನೇಹಿ ಗಣಪತಿಯನ್ನು ತಯಾರಿಸುವ ಮೂಲಕ ಎಲ್ಲರ ಪ್ರಸಂಶೆಗೂ ಇವರು ಪಾತ್ರರಾಗಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *