DAKSHINA KANNADA
ದ.ಕ. ಜಿಲ್ಲೆಯಲ್ಲಿ ಕಂಗ್ಗಾಂಟಾಗಿ ಉಳಿದ ಕಮಲ ಕಲಿಗಳ ಆಯ್ಕೆ: ಅಂಗಾರ ಮಾತ್ರ ಪಾಸ್
ದ.ಕ. ಜಿಲ್ಲೆಯಲ್ಲಿ ಕಂಗ್ಗಾಂಟಾಗಿ ಉಳಿದ ಕಮಲ ಕಲಿಗಳ ಆಯ್ಕೆ: ಅಂಗಾರ ಮಾತ್ರ ಪಾಸ್
ಮಂಗಳೂರು, ಎಪ್ರಿಲ್ 09 : ವಿಧಾನ ಸಭಾ ಚುನಾವಣೆಗೆ ಕೇವಲ ಒಂದೇ ತಿಂಗಳು ಬಾಕಿ ಇದೆ. ಬಿಜೆಪಿ ಕೇಂದ್ರ ಆಯ್ಕೆ ಸಮಿತಿ ರವಿವಾರ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ದಟಿಯನ್ನು ಬಿಡುಗಡೆ ಮಾಡಿದೆ.
ಆದರೆ ಬಿಜೆಪಿ ಭದ್ರಕೋಟೆಯಾಗಿದ್ದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಮಲ ಕಲಿಗಳ ಆಯ್ಕೆ ಕಂಗ್ಗಾಂಟಾಗಿಯೇ ಉಳಿದಿದೆ.
ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿ ಯಲ್ಲಿ ಸುಳ್ಯದ ಹಾಲಿ ಶಾಸಕ ಅಂಗಾರ ಮಾತ್ರ ಪಾಸ್ ಆಗಿದ್ದು, ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಉಳಿದಂತೆ ಪ್ರಮುಖ ಕ್ಷೇತ್ರಗಳಾಗಿರುವ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮಂಗಳೂರು ದಕ್ಷಿಣ, ಉತ್ತರ ಕ್ಷೇತ್ರಗಳಿಗೆ ಇನ್ನೂ ಕಮಲ ಅಭ್ಯರ್ಥಿಗಳ ಹೆಸರುಗಳು ಅಂತಿಮವಾಗಿಲ್ಲ.
ಈ ಮಧ್ಯೆ ಬೆಳ್ತಂಗಡಿ ಕ್ಷೇತ್ರದ ಟಿಕೆಟ್ ಗಾಗಿ ಅಕಾಂಕ್ಷಿಗಳ ಭಾರೀ ಲಾಭಿ ಆರಂಭವಾಗಿದೆ.
ಕಳೆದ ಭಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರಾ ಎದುರು ಸೋತ ರಂಜನ್ ಗೌಡ ಟಿಕೆಟಿಗಾಗಿ ದೆಹಲಿಯಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಟಿಕೆಟ್ ಪಡೆಯುವ ಸಲುವಾಗಿ ವರಿಷ್ಠರ ಮನವೊಲಿಸಲು ಭಾರೀ ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೋರ್ವ ಪ್ರಮುಖ ಆಕಾಂಕ್ಷಿ ಯುವ ನಾಯಕ , ನ್ಯಾಯವಾದಿ ಹಾಗೂ ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ಹರೀಶ್ ಪೂಂಜಾ ಗೆ ಟಿಕೆಟ್ ನೀಡಲು ಕಾರ್ಯಕರ್ತರು ಹೈಕಮಾಂಡ್ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ.
ಮಂಗಳೂರು ಉತ್ತರ, ದಕ್ಷಿಣ, ಕ್ಷೇತ್ರಗಳು ಬಿಜೆಪಿಯ ಪಾಲಿಗೆ ಮಹತ್ವದಾಗಿದ್ದು, ಇಲ್ಲೂ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.
ಕಳೆದ ಬಾರಿ ಕಾಂಗ್ರೆಸ್ಇನ ಮೊಯಿದಿನ್ ಬಾವಾ ಎದುರು ಸೋತ ಮಾಜಿ ಬಿಜೆಪಿ ಪ್ರಭಾವಿ ನಾಯಕ ಕೃಷ್ಣ ಜೆ ಪಾಲೇಮಾರಿಗೂ ಈ ಬಾರಿ ಮೊದಲ ಪಟ್ಟಿಯಲ್ಲಿ ಸ್ಥಾನ ದೊರಕದಿರುವುದು, ಉತ್ತರ ಕ್ಷೇತ್ರದಲ್ಲೂ ಟಿಕೆಟ್ ಆಕಾಂಕ್ಷಿಗಳು ಹೆಚ್ಚು ಇದ್ದಾರೆ ಎಂಬುವುದಕ್ಕೇ ಸಾಕ್ಷಿಯಾಗಿದೆ.
ಇನ್ನೂ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ಉದ್ದನೇ ಇದೆ.
ಜಿಎಸ್ ಬಿ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಬದ್ರಿನಾಥ್ ಕಾಮತ್, ಹಾಗೂ ವೇದವ್ಯಾಸ್ ಕಾಮತ್ ನಡುವೆ ಟಿಕೆಟಿಗಾಗಿ ಶೀತಲ ಸಮರ ನಡೆಯುತ್ತಿದೆ.
ಉಳಿದಂತೆ ಬಿಜೆಪಿಯ ಯುವ ನಾಯಕ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜೀತೇಂದ್ರ ಕೊಟ್ಟಾರಿ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿದೆ.
ಕಾಂಗ್ರೆಸ್ಸಿನ ಯು.ಟಿ ಖಾದರ್ ಅವರ ಮಂಗಳೂರು ಕ್ಷೇತ್ರದಲ್ಲೂ ಬಿಜೆಪಿ ಈ ಬಾರಿ ಕಣ್ಣಿಟಿದೆ.
ಶತಾಯ ಗತಾಯ ಈ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಕಾರಣದಿಂದ ಇಲ್ಲೂ ಗೆಲ್ಲುವ ಅಭ್ಯರ್ಥಿಯ ಹುಡುಕಾಟದಲ್ಲಿ ಬಿಜೆಪಿ ಇದೆ.
ಒಟ್ಟಾರೆಯಾಗಿ ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದ ಟಿಕೇಟ್ ನ ಗೊಂದಲ ಈ ಬಾರಿ ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲೂ ಆರಂಭವಾಗಿರುವುದು ಬಿಜೆಪಿ ಹೈಕಮಾಂಡಿಗೆ ತಲೆ ನೋವಾಗಿರುವುದು ಮಾತ್ರ ಸತ್ಯ.
ಚುನಾಣೆಗೆ ಇನ್ನೂ ಕೇವಲ ಒಂದೇ ತಿಂಗಳು ಇದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರೀಯೇ ಶೀಘ್ರದಲ್ಲಿ ನಡೆಯದಿದ್ದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಎಲ್ಲಾ ಸಾಧ್ಯತೆಗಳಿವೆ.