DAKSHINA KANNADA
ದಾಖಲೆ ರಹಿತ 50 ಲಕ್ಷ ಮೌಲ್ಯದ ನಿಷೇಧಿತ ನೋಟು ಪತ್ತೆ, ಮೂವರ ಬಂಧನ.

ಪುತ್ತೂರು ನಗರ ಪೋಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 50 ಲಕ್ಷ ಮೌಲ್ಯದ ನಿಷೇಧಿತ 500 ಹಾಗೂ 1000 ರೂಪಾಯಿ ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
ನಗರ ಪೋಲೀಸರು ಪುತ್ತೂರಿನ ಉರ್ಲಾಂಡಿ ಬಳಿ ಕಾರು ತಪಾಸಣೆ ನಡೆಸುತ್ತಿದ್ದ ಸಂದರ್ಭ ಮಡಿಕೇರಿಯಿಂದ ಮಾಣಿ ಕಡೆಗೆ ಸಾಗುತ್ತಿದ್ದ ಕಾರಿನಲ್ಲಿ ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪೋಲೀಸರು ವಳಾಲು ನಿವಾಸಿ ಮಹಮ್ಮದ್ ಸಿರಾಜ್(34), ಅಬ್ದುಲ್ ಶಾರಿಕ್(29), ಬೆದ್ರೋಡಿ ನಿವಾಸಿ ನಿಸಾರ್(28) ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಉಪ್ಪಿನಂಗಡಿಯಲ್ಲಿ ಹಳೆ ನೋಟುಗಳನ್ನು ಬದಲಾಯಿಸಲೆಂದು ಕೊಂಡೊಯ್ಯಲಾಗುತ್ತಿದ್ದು, ಮಡಿಕೇರಿ ಮೂಲದ ಉದ್ಯಮಿಗೆ ಸೇರಿದ ಹಣವೆಂದು ಬಂಧಿತರು ಪೋಲೀಸರಿಗೆ ತಿಳಿಸಿದ್ದಾರೆ.