Connect with us

LATEST NEWS

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಶೂಟೌಟ್ ಪ್ರಕರಣ – ಭೂಗತ ಪಾತಕಿ ಕಲಿ ಯೋಗೀಶ್ ಸಹಚರರ ಬಂಧನ

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಶೂಟೌಟ್ ಪ್ರಕರಣ – ಭೂಗತ ಪಾತಕಿ ಕಲಿ ಯೋಗೀಶ್ ಸಹಚರರ ಬಂಧನ

ಮಂಗಳೂರು ಡಿಸೆಂಬರ್ 28: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ 2 ಶೂಟೌಟ್ ಪ್ರಕರಣ ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರಿನ ಹೃದಯ ಭಾಗದ ಕಾರ್ ಸ್ಟ್ರೀಟ್ ನಲ್ಲಿರುವ ಸಂಜೀವ ಶೆಟ್ಟಿ ಬಟ್ಟೆ ಮಳಿಗೆ ಹಾಗೂ ಮುಲ್ಕಿಯಲ್ಲಿ ನಗರಸಭಾ ಗುತ್ತಿಗೆದಾರ ನಾಗರಾಜ್ ಅವರ ಮನೆಯ ಮೇಲೆ ನಡೆಸಿದ ಶೂಟೌಟ್ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ.

ಈ ಕೃತ್ಯಗಳನ್ನ ಒಂದೇ ತಂಡ ಎಸಗಿರುವುದು ಬಯಲಾಗಿದೆ. ಈ ಶೂಟೌಟ್ ಪ್ರಕರಣಗಳ ಹಿಂದೆ ಭೂಗತ ಪಾತಕಿ ಕಲಿ ಯೋಗೀಶ್ ನ ಕೈವಾಡ ಇರುವುದು ಬಯಲಾಗಿದೆ.

ಈ ಎರಡು ಶೂಟೌಟ್ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೋಲಿಸರು ಕಲಿ ಯೋಗೀಶ್ ಗ್ಯಾಂಗ್ ನ ಇಬ್ಬರು ಸಹಚರನನ್ನು ಬಂಧಿಸಿದ್ದಾರೆ.

ಬಂಧಿತರನ್ನು ಚಂದ್ರಶೇಖರ್ ಹಾಗೂ ಮನೋಜ್ ಕುಂದರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲು ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *