UDUPI
ಜಾಹೀರಾತು ಪ್ರಕಟಿಸಿದ ಬಿಲ್‍ಗಳ ಪ್ರತಿಯನ್ನೊಳಗೊಂಡ ಮಾಹಿತಿ ನೀಡಿ : ಪತ್ರಿಕೆಗಳಿಗೆ ಜಿಲ್ಲಾಧಿಕಾರಿ ಸೂಚನೆ
ಜಾಹೀರಾತು ಪ್ರಕಟಿಸಿದ ಬಿಲ್‍ಗಳ ಪ್ರತಿಯನ್ನೊಳಗೊಂಡ ಮಾಹಿತಿ ನೀಡಿ : ಪತ್ರಿಕೆಗಳಿಗೆ ಜಿಲ್ಲಾಧಿಕಾರಿ ಸೂಚನೆ
ಉಡುಪಿ ಮಾರ್ಚ್ 17 : ಚುನಾವಣಾ ನೀತಿ ಸಂಹಿತೆ ಜಾರಿಯಾದ ತಕ್ಷಣ ಚುನಾವಣಾ ಆಯೋಗದ ಮಾರ್ಗದರ್ಶನದಡಿ ಸೂಚನೆಗಳನ್ನು ಪಾಲಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಜಿಲ್ಲಾ ಮಟ್ಟದ ಎಂಸಿಎಂಸಿ (ಮೀಡಿಯಾ ಸರ್ಟಿಫಿಕೇಷನ್ ಮತ್ತು ಮೀಡಿಯಾ ಮಾನಿಟರಿಂಗ್ ಸೆಲ್ ) ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಪತ್ರಕರ್ತರಿಗೆ ಮಾಹಿತಿಯನ್ನು ನೀಡಿದರು.
‘ಪೇಯ್ಡ್ ನ್ಯೂಸ್’ ಬಗ್ಗೆ ಚುನಾವಣಾ ಆಯೋಗದ ವ್ಯಾಖ್ಯಾನವನ್ನೊಳಗೊಂಡಂತೆ ಸಮಿತಿ ರಚನೆ ಬಗ್ಗೆ ಮಾಹಿತಿ ನೀಡಿದರು.
ಸ್ಥಳೀಯ ಚಾನೆಲ್‍ಗಳವರು ನೀತಿಸಂಹಿತೆ ಜಾರಿಯಾದಾಗಿನಿಂದ ಟೆಲಿಕಾಸ್ಟ್ ಮಾಡುವ ಕಾರ್ಯಕ್ರಮಗಳ ಪಟ್ಟಿಯನ್ನು ಸಿದ್ಧವಾಗಿರಿಸಿಕೊಳ್ಳಬೇಕು.
ಪತ್ರಿಕೆಗಳು ಸ್ಥಳೀಯ ಜಾಹೀರಾತು ಪ್ರಕಟಿಸಿದ ಬಿಲ್‍ಗಳ ಪ್ರತಿಯನ್ನೊಳಗೊಂಡ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ವಾರಕ್ಕೊಮ್ಮೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಎಂಸಿಎಂಸಿಯ ನೋಡಲ್ ಅಧಿಕಾರಿ ನಯನಾ ಅವರು ಎಂಸಿಎಂಸಿಯ ಕಾರ್ಯವಿಧಾನದ ಬಗ್ಗೆ ವಿವರಿಸಿದರು.
ತಾಲೂಕು ಮಟ್ಟದಲ್ಲೂ ಮಾನಿಟರಿಂಗ್ ವ್ಯವಸ್ಥೆ ಇರುತ್ತದೆ ಎಂದು ಹೇಳಿದರು. ಎಂಸಿಸಿಯ ನೇತೃತ್ವ ವಹಿಸಿರುವ ಐಎಎಸ್ ಅಧಿಕಾರಿ ಪೂವಿತಾ ಅವರು ಪತ್ರಕರ್ತರ ಸಂದೇಹಗಳಿಗೆ ಉತ್ತರಿಸಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಅಶೋಕ್ ಕಾಮತ್ ಚುನಾವಣಾ ಪ್ರಕ್ರಿಯೆ ಮತ್ತು ಸ್ವೀಪ್ ಕುರಿತು ಸಮಗ್ರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರು ಸ್ವೀಪ್ ಕಾರ್ಯಕ್ರಮ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರಲ್ಲದೆ, ಸಹಾಯವಾಣಿಯ ಕುರಿತು ಹೇಳಿದರು.
ಸಾಂಕೇತಿಕವಾಗಿ ವಿವಿಧ ಇಲಾಖೆಗಳಿಗೆ ಬ್ಯಾನರ್, ಸೀಲ್, ಕರಪತ್ರಗಳನ್ನೊಳಗೊಂಡ ಮಾಹಿತಿ ಚೀಲವನ್ನು ಹಸ್ತಾಂತರಿಸಿದರು.