LATEST NEWS
ಜಗದೀಶ್ ಕಾರಂತ ಬಂಧನ ವಿರೋಧಿಸಿ ಸರಕಾರಿ ಬಸ್ ಗಳಿಗೆ ಕಲ್ಲು

ಜಗದೀಶ್ ಕಾರಂತ ಬಂಧನ ವಿರೋಧಿಸಿ ಸರಕಾರಿ ಬಸ್ ಗಳಿಗೆ ಕಲ್ಲು
ಮಂಗಳೂರು ಸೆಪ್ಟೆಂಬರ್ 29: ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ಬಂಧನದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕೆರಳಿಸಿವೆ. ಹಿಂಜಾವೇ ಮುಖಂಡ ಜಗದೀಶ್ ಕಾರಂತ ಬಂಧನ ವಿರೋಧಿಸಿ ಪುತ್ತೂರಿನಲ್ಲಿ ಸರ್ಕಾರಿ ಬಸ್ ಗೆ ಕಲ್ಲು ತೂರಾಟ ನಡೆಸಲಾಗಿದೆ.
ಪುತ್ತೂರಿನ ಬೊಳುವಾರಿನಲ್ಲಿ ಚಲಿಸುತ್ತಿದ್ದ ಬಸ್ ಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬೈಕ್ ನಲ್ಲಿ ಬಂಧ ದುಷ್ಕರ್ಮಿಗಳು ಚಲಿಸುತ್ತಿದ್ದ ಬಸ್ ಮೇಲೆ ಕಲ್ಲು ತೂರಿ ಪರಾರಿಯಾಗಿದ್ದಾರೆ.

ಜಗದೀಶ ಕಾರಂತ ಬಂಧನ ಖಂಡಿಸಿ ಪುತ್ತೂರಿನಲ್ಲಿ ಹಿಂದೂ ಸಂಘಟನೆ ಬ್ರಹತ್ ಪ್ರತಿಭಟನೆ ಮುಂದಾಗಿವೆ.
ಹಿಂದೂ ಸಂಘಟನೆಗಳಿಂದ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಬೆಂಗಳೂರಿನ ನಿಮಾನ ನಿಲ್ದಾಣ ದಲ್ಲಿ ಬಂಧಿಸಲಾಗಿರುವ ಜಗದೀಶ್ ಕಾರಂತ ಅವರನ್ನು ಸುಮಾರು 07 ಗಂಟೆಗೆ ಪುತ್ತೂರಿನ ನ್ಯಾಯಾಲಯದಲ್ಲಿ ಜಗದೀಶ್ ಕಾರಂತ್ ಹಾಜರು ಪಡಿಸಲಾಗುವುದೆಂದು ಹೇಳಲಾಗಿದೆ.